Bhasaka
← Back to home

ಅಗ್ನಿಮಂತ್ರ ದೀಕ್ಷೆಯ

Category: ಶ್ರೀದೇವಿRaaga: ಯಮನ್ ಕಲ್ಯಾಣ್Taala: ಏಕತಾಲ
ಅಗ್ನಿಮಂತ್ರ ದೀಕ್ಷೆಯ ಕೊಡು ನಿನ್ನ ಸಂತಾನಕಿಂದು | ಆಶೀರ್ವಾದ ಕವಚ ತೊಡಿಸು ದೈನ್ಯವಸನದಿಂ ಬಿಡಿಸು || ಕುದಿಸು ಎಮ್ಮ ಹೃದಯ ರುಧಿರ ಒರಸು ಭಯದ ಅಶ್ರು ಜಲವ ನಿಲಿಸು ಎಮ್ಮಜಗದ ಸಭೆಯೊಳ್ ನಿನ್ನ ಸುತ್ತ ತಾಯಿ || ನರರು ನಾವು ಕುರಿಗಳಲ್ತು ನಿನ್ನ ಸುತರು ದೀನರೆಂತು ವ್ಯರ್ಥ ಭೀತಿ ಏಕೆ ಇನ್ನು ಮಿಥ್ಯವಲ್ತೆ ಈ ಲಜ್ಜೆ || ಬಾರಮ್ಮ ಬಾರಮ್ಮ ಬಾರೆಮ್ಮ ತಾಯಿ ದಶಪ್ರಹರಣ ಧಾರಿಣೀ ನಗುತ ಅಟ್ಟ ಅಟ್ಟಹಾಸದಿ ದಿವಿಯ ಭುವಿಯ ತುಂಬಿ ನೀ ಸಾಧಿಸಿ ನಿನ್ನ ಕಾರ್ಯವನ್ನು ಭೇದ ಸ್ವಾರ್ಥ ಕಳೆವೆವು ||

Thoughts & Reflections

0

No reflections shared yet. Be the first to share your thoughts!

Share your thought