Bhasaka
← Back to home

ಅಂತರಂಗದಲಿ ಶ್ರೀಘನಶ್ಯಾಮೆಯ

Author: ವಚನವೇದCategory: ಶ್ರೀದೇವಿRaaga: ಕೇದಾರಾTaala: ತ್ರಿತಾಲ
ಅಂತರಂಗದಲಿ ಶ್ರೀಘನಶ್ಯಾಮೆಯ ಆದರಿಸೆಲೆ ಮನವೇ | ನಮ್ಮಿಬ್ಬರ ಹೊರತಾರೂ ಅರಿಯದ ರೀತಿಯೊಳವಳೆಡೆ ಸಾಗುವವೇ || ಅಂತರಂಗ.... ಓ ಮನವೇ ನಿನ್ನ ಆಸೆ ಸಾಸಿರವ ಆಚೆ ನಿಲಿಸಿ ಬಾರೋ | ಬಾಗಿಲಾಚೆ ನಿಲಿಸಿ ಬಾರೋ | ಏಕಾಂತದಿ ನೀನಾಕೆಯ ಕಾಣಲು “ಓ ತಾಯಿ” ಎಂದೆನ್ನುವ ರಸನೆಯ ಮಾತ್ರ ಕರೆದು ತಾರೋ || ಅಂತರಂಗ.... ಕುಟಿಲ ಕುಮಂತ್ರವ ದೂರ ತಳ್ಳಿ ನೀ ಬಾ ನಮ್ಮನು ನೋಡು | ಜ್ಞಾನನಯನವನು ಪಹರೆ ನಿಲಿಸಿ ನೀ ಒಳಗೆ ಬಂದು ಕೂಡೋ ||

Thoughts & Reflections

0

No reflections shared yet. Be the first to share your thoughts!

Share your thought