Bhasaka
← Back to home

ಜಯ ಜಾಹ್ನವಿ ದೇವಿ ಜಯ ಭಕುತ ಸಂಜೀವಿ

Author: ವಿಜಯದಾಸCategory: ಶ್ರೀಗಂಗೆ
ಜಯ ಜಾಹ್ನವಿ ದೇವಿ ಜಯ ಭಕುತ ಸಂಜೀವಿ ಜಯ ಪ್ರದಾಯಕ ವೀವೆ ಜಯ ಎಮ್ಮ ಕಾವೆ ಅಜನ ಸಭೆಯಲಿ ವರುಣಗೆ ಶಾಪವು ಬರಲು ಪ್ರಜಪಾಲನಾದ ಶಂತುನ ನಾಮದೀ ನಿಜರೂಪದಲಿ ಬಂದು ಅಷ್ಟವಸುಗಳ ಪಡೆದೆ ಭಜಿಸಬಲ್ಲೆನೆ ನಿನ್ನ ಬಹು ಭಾಗ್ಯವಂತೇ||1|| ಭಗೀರಥಗೆ ವೊಲಿದು ಭವದೂರ ಪಾವನಕಾರೆ ಸಗರರಾಯನ ವಂಶವನ್ನೆ ಉದ್ಧಾರೆ ಅಗಣಿತೋದಯ ಪಾರಂವಾರೆ ಶುಭಶರೀರೆ ಮುಗುವೆನು ಕರವೆತ್ತಿ ಸಂತತ ವಾರಂವಾರೆ ||2|| ಏನು ಧನ್ಯರೊ ಎನ್ನ ಕುಲಕ ಪಾವನೆಯೆನಲು ನೀನುಬ್ದಿ ಪೊರದೆ ಉತ್ಸಾಹದಿ ಮೆರೆದೆ ಮಾನನಿಧಿ ವಿಜಯವಿಠ್ಠಲನ ಸನ್ನಿಧಿಯಲ್ಲಿನಪೂರ್ವಕ ವೊಲಿದು ಭಕುತಿ ಕೊಡು ಎನಗೆ ||3||

Thoughts & Reflections

0

No reflections shared yet. Be the first to share your thoughts!

Share your thought