Bhasaka
← Back to home

ಜಯಜಯತು ಜಾಹ್ನವಿಯೆ ಭಕ್ತ ಸಂಜೀವಿ

Author: ವಿಜಯದಾಸCategory: ಶ್ರೀಗಂಗೆ
ಜಯಜಯತು ಜಾಹ್ನವಿಯೆ ಭಕ್ತ ಸಂಜೀವಿ ಜಯ ಮಂಗಳವನೀಯೆ ಜಯ ನಮ್ಮ ಕಾಯೆ ಕಮಲಜನು ಪಾತ್ರೆಯೊಳು ಧರಿಸಲಾ ಹರಿಪಾದ- ಕಮಲವನು ತೊಳೆಯಲಾವೇಗದಿಂದ ವಿಮಲ ಸಂಗತಿಯಿಂದ ಮಂದಾದಿನಿಯೆನಿಸಿ ಸುಮನ ಸಾವನಿಯಲ್ಲಿ ಮೆರೆದೆ ಸುರನದಿಯೆ||1|| ಧ್ರುವಲೋಕಕಿಳಿದು ಅಮರಾವತಿಯ ಸಾರಿದೆ ರವಿಯಂತೆ ಪೊಳೆಯುತ ಆ ಜನ ಮಧ್ಯದಿಂ ಭುವನದೊಳಗೀರೈದು ನೂರು ಯೋಜನದಗಲ ತವಕದಿಂದಲಿ ಧುಮುಕಿ ಚತುರ ಭಾಗವಾದೆ ||2|| ಶಿವನ ಮಸ್ತಕದಲ್ಲಿ ಶೋಭಿಸುವ ಮಹಮಹಿಮೆ ಭವದೊರೆ ಭಗೀರಥಗೆ ವಲಿದು ಬರುತ ಕವಿ ಜನ್ಹುಮುನಿಯಿಂದ ಪುಟ್ಟಿ ಹಿಮಗಿರಿ ದಾಟಿ ಜವನ ಭಗಿನಿಯ ಕೂಡಿ ಮಣಿಕರ್ಣಿಕೆಯ ನೆರದೆ ||3|| ಅಳಕನಂದನೆ ನಿನ್ನ ಸ್ಮರಣೆ ಮಾಡಿದ ಜನಕೆ ಕುಲಕೋಟಿ ಪಾವನವು ಸಂದೇಹವಿಲ್ಲ ಸಲಿಲವನು ಸ್ಮರಿಸಿ ಮಜ್ಜನ ಪಾನ ಮಾಡಿದಗೆ ಪೊಳೆಗೆ ವೈಕುಂಠಪುರ ಅವನ ಹೃದಯದಲಿ ||4|| ದೇಶದೇಶಗಳಿಂದ ಬಂದ ಸುಜನರ ಪಾಪ ನಾಶನವ ಮಾಳ್ಪ ನೀ ನಿಷ್ಕಾಮದಿ ಕಾಶಿಸ್ಥ ಬಿಂದು ಮಾಧವ ವಿಜಯವಿಠ್ಠಲನ ಸೋಸಿನಿಂದಲಿ ಪೊಗಳುತಿಹೆ ಸುವಿಖ್ಯಾತೆ ||5||

Thoughts & Reflections

0

No reflections shared yet. Be the first to share your thoughts!

Share your thought