Bhasaka
← Back to home

ಜಯರಾಯರ ನೋಡಿರೋ ಸಜ್ಜನರೆಲ್ಲ

Author: ವಿಜಯದಾಸCategory: ಇತರೆ
ಜಯರಾಯರ ನೋಡಿರೋ ಸಜ್ಜನರೆಲ್ಲ ಜಯರಾಯರ ನೋಡಿರೋ ಜಯರಾಯರ ನೋಡಿ ಜಪಿಸಿ ಮನದಿ ಪಾಡಿ ಜಯವಾಗುವುದು ನಿಮಗೆ ಭಯನಾಶ ಸಂತತ ದುರುಳಮತವೆಂಬೊ ಕರಿಗೆ ಅಂಕುಶವಿತ್ತು ಸುರಸಾದ ಗ್ರಂಥ ಆನಂದಮುನಿ ವಿರಚಿಸಿ ಇರಲಾಗಿ ಪರಮಭಕ್ತಿಯಿಂದ ವಿ ಸ್ತರ ಮಾಡಿದಾ ಕರದ ಕನ್ನಡಿಯಂತೆ ||1|| ವಾದಿಗಳನ್ನೆಲ್ಲಾ ಜೈಸಿ ಡಂಗುರ ಹೊಯ್ಸಿ ಭೇದಾರ್ಥe್ಞನ ಸತ್ಯವೆನಿಸಿ ಈ ಧರಿಯೊಳಗೆ ಹರಿಪರ ದೈವವೆಂದು ಸಾಧಿಸಿ ಉದ್ದಂಡವಾದ ಗುರುತಿಲಕ ||2|| ಅಕ್ಷೋಭ್ಯತೀರ್ಥರ ಕರದಿಂದ ಜನಿಸಿ ಮೋಕ್ಷಕೆ ಜಯ ಪತ್ರಿಕೆ ಕೊಡಿಸಿ ಪಕ್ಷಿವಾಹನ ಸಿರಿ ವಿಜಯವಿಠ್ಠಲನನ್ನ ನೀಕ್ಷಿಸುವದಕೆ ಉಪದೇಶ ಕೊಡುವ ಋಷಿ ಶ್ರೀ ಮಧ್ವೇಶಾರ್ಪಿತವು||3||

Thoughts & Reflections

0

No reflections shared yet. Be the first to share your thoughts!

Share your thought