Bhasaka
← Back to home

ಜರಿಯಬೇಡ

Author: ವಿಜಯದಾಸCategory: ಶ್ರೀಕೃಷ್ಣ
ಜರಿಯಬೇಡ ಹರಿಯ ಮರೆಯಬೇಡೆಂದೆಂದು| ತಿರಿಯಬೇಡ ಖಳರ ಮನೆಗೆ ಪೋಗಿ | ಒರೆಯಬೇಡನ್ಯರಿಗೆ ರಹಸ್ಯ ತತ್ವಗಳನು | ಬೆರೆಯಬೇಡ ಪರರ ಸತಿಯ ಸ್ವಪ್ನದಲೂ ಮೂಕವಾರ್ತೆಯ ನಿನ್ನ ಕಿವಿಗೆ ಕೇಳಿಸಬೇಡ | ಶ್ರೀಕಾಂತ ಚರಿತೆಯನು ಕೇಳದಿರಬೇಡ | ಪಾಕವನು ಮಾಡಿ ಏಕಾಂಗಿಯಾಗುಣಬೇಡ| ಭೂಕಾಂತರನುಸರಿಸಿ ಬೆಸಗೊಳ್ಳಬೇಡ ||1|| ಪಂಡಿತರು ಪಾಮರರು ಆರಿಗಾದರೂ ನಿನ್ನ | ಕಂಡವರಿಗೆಲ್ಲ ಕೌತುಕವು ತೋರಿದರೂ| ಹೆಂಡಿರು ಮಕ್ಕಳು ಅಳಿಯ ಸೋಸೆ ಮೊಮ್ಮಕ್ಕಳು | ಉಂಡುಟ್ಟು, ದ್ವಿಜರು ಸಹ ಗಂಡುಗಲಿಯಾದರೂ||2|| ಮಂದಮತಿಗಳ ಕೂಡೆ ಮಾತಾಡಲಿ ಬೇಡ | ನಿಂದಕರ ಕಣ್ಣೆತ್ತಿ ನೋಡಬೇಡ | ಇಂದಿರೆಯರಸ ಶ್ರೀ ವಿಜಯ ವಿಠಲರ ಚರಣ| ದ್ವಂದ್ವದಲಿ ಮಸ್ತಕವನಿಡದಿರಬೇಡ ||3||

Thoughts & Reflections

0

No reflections shared yet. Be the first to share your thoughts!

Share your thought