Bhasaka
← Back to home

ಜೋ ಜೋ ಹರಿ ಜಾಹ್ನವಿ ಜನಕ

Author: ವಿಜಯದಾಸCategory: ಶ್ರೀಕೃಷ್ಣ
ಜೋ ಜೋ ಹರಿ ಜಾಹ್ನವಿ ಜನಕ ಮೂಜಗತ್ಪತಿ ಸುರಕುಲ ಸನಕಾ ದೀಜನ ಮನೋಹರ ಮಾಣಿಕ್ಯ ಕನಕಾ ವೈಜಯಂತಿ ಹಾರ ಪಾವನ್ನ ಪದಕ ಕೇಶಿಭಂಜನ ವ್ಯೋಮಕೇಶ ವಂದಿತ ಪಾದ ಕ್ಲೇಶನಾಶನ ವಾತೇಶನ ಜನಕ ಕೇಶರಿರುಹ ಮುಂಜಿಕೇಶನೆ ಕುಂಕುಮ ಕೇಸರಿಭೂಷಣ ಕೇಶವ ಶೌರಿ ||1|| ವಾರುಣಿ ಪತಿನುತ ವಾರುಣನ ಭಯ ನಿ ವಾರಣಾ ವಾರಣಾಶಿ ಪುರದರಸೆ ವಾರಣ ನಗರಿಯ ವಾರನಹತಪಲ್ಲ ವಾರುಣಿ ಪಾಣಿಯೆ ನಾರಾಯಣನೆ ಜೋ ಜೋ ||2|| ಮಾದೇವಿ ರಮಣ ಭೂಮಿದೇವಿ ಉದ್ಧಾರ ಮಾಧುರ್ಯ ವಚನ ಉಮಾದೇವಿ ವಿನುತಾ ಮಾಧಾರ ಮಹಶೂರ ಮತ್ಕುಲನೆ ಪ್ರೇ ಮಾದವನನೆ ಹರಿ ಮಾಧವ ರಾಯಾ ||3|| ಗೋವಳಿ ಪರಿಪಾಲ ಗೋವಳೇರಾ ಪ್ರಿಯಾ ಗೋವುಗಳ ಕಾಯಿದ ಗೋವಳರಾಯಾ ಗೋವರ್ಧನುದ್ಧಾರ ಗೋ ವಿಪ್ರ ಸಂರಕ್ಷ ಗೋವಿದಾಂಪತಿ ರಂಗ ಗೋವಿಂದ ನಂದ ||4|| ಮಧುಕೈಟಭಾಸುರ ಮದಗರ್ವ ಮರ್ದನ ಮದನ ಜನಕ ನಿತ್ಯ ಮಧುರನ್ನ ಪಾನಾ ಮಧುರಾಪುರ ಪಾಲ ಮದಗಜ ಹರಣಾ ಶಾ ಮದವರ್ಣ ಶರೀರ ಮಧುಸೂದನನೆ ||5|| ಇಷ್ಟಭಕ್ತರ ಕುಲ ಇಷ್ಟದೈವವೆ ಸರ್ವ ಇಷ್ಟಾರ್ಥ ಕೊಡುವ ಬಲಿಷ್ಟನು ನಿನ್ನ ಇಷ್ಟ ಅಷ್ಟಯೆಂದು ತಿಳಿಯಲಿ ವಶವಲ್ಲ ವಿಷ್ಣು ಸರ್ವೋತ್ತಮ ವಿಶ್ವನಾಟಕನೆ||6|| ಅಕ್ರಮದಲಿ ಸ್ವರ್ಗ ಆಕ್ರಮಿಸಿ ಬಲಿ ವಿಕ್ರಮನಾಗಿ ಕಾಲಕ್ರಮಣಿ ಮಾಡೆ ಶಕ್ರಮರ್ಚಿಸೆ ಅನುಕ್ರಮನಾಗಿ ಪ ರಾಕ್ರಮದಲಿ ಬೆಳದೆ ತ್ರಿವಿಕ್ರಮನೆ ||7|| ವಾಮಲೋಚನೆಯರ ವಾಮನ ಕೆಡಿಸಿದೆ ವಾಮನವಾಶಿಷ್ಟವಾ ಮುನಿವಂದ್ಯ ವಾಮನದಲಿ ದಾನವಾಮನ್ಯಗಳರನ್ನು ಅ ವಮಾನ ಮಾಡಿದೆ ಸಿರಿವಾಮನನೆ ||8|| ಶ್ರೀಧರ ರಮಣನೆ ಶೃಂಗಾರ ವಾರಿಧಿ ಶ್ರೀಧನ ಸಂಪತ್ತಾಶ್ರಿತ ಜನರಿಗೆ ಶ್ರೀಧೇನು ನೀನಯ್ಯಾ ಶ್ರೀ ಕರುಣಾಕರ ಶ್ರೀದೇವಿ ಉರಭೂಷಾ ಶ್ರೀಧರನಂತಾ ||9|| ಋಷಿಕೇಶನ ತಾತ ಋಷಿಜನ ಸಂಪ್ರೀತ ಋಷಿಕುಲೋದ್ಭವ ಪುರುಷ ರಾಮ ಮಹಾ ಋಷಿನಾಮಧೇಯನೆ ಋಷಿಪತ್ನಿ ಪಾಲನೆ ಋಷಿಗಳ ಒಡೆಯನೆ ಹೃಷಿಕೇಶ ದೇವ ||10|| ಪದುಮಜಾಂಡದಲ್ಲಿ ಪದುಮೆ ಮಾತನು ಕೇಳಿ ಪದುಮನಾಭಿಯಲ್ಲಿ ಪದುಮಜನ ಪೆತ್ತ ಪದುಮಾಸ್ಯ ಪದುಮಾಕ್ಷ ಪದುಮಕರನೆ ಪಾದ ಪದುಮ ಮಿಗಲು ಕಾಂತಿ ಪದುಮನಾಭನೆ||11|| ಧಾಮನಿಧಿಕುಲನು ಧಾಮನೆ ನಿರುತ ತ್ರಿ ಧಾಮನಿವಾಸ ಸುಧಾಮನ ಮಿತ್ರ ಧಾಮ ಪುಣ್ಯಧಾಮ ಭಕ್ತ ಹೃದ್ವನಜ ಧಾಮ ಮಧುಕರನೆ ದಾಮೋದರ ಧರ್ಮಾ ||12|| ಶಂಖ ಸುರಾಹರಾ ನಿಃಶಂಕ ಚರಿತ ಶಂಖಪಾಣಿ ಶಶಾಂಕ ಸುವದನ ಸಂಖ್ಯೆಯಿಲ್ಲದೆ ತಾಯಿ ಸಂಕಲೆ ಹರಿಗಡಿದೆ ಸಂಕರುಷಣನುವುಜ ಸಂಕರುಷಣನೆ ||13|| ಪ್ರದ್ಯೋತ ಶತತೇಜ ಪ್ರಧಾನ ಮೂರುತಿ ಪ್ರದ್ವೀಪ ವರ್ಣ ಸುಪ್ರದಾಯಕನೆ ಪ್ರದೇಶ ಪರಿಮಾಣ ವರಪ್ರದ ಸಿದ್ಧನೆ ಪ್ರದ್ಯುಕ್ತ ಅವ್ಯಕ್ತ ಪ್ರದ್ಯುಮ್ನ ವಿಶ್ವ||14|| ವಾಸುವಾನುಜ ಶ್ರೀನಿವಾಸ ಪುಂಡ್ರೀಕ ವಾಸುದೇವನ ಶಮನಪುರದಲ್ಲಿ ವಾಸಮಾಡಿಸಿದಯ್ಯಾ ವಾಸವಾರ್ಚಿತ ಶ್ರೀ ವಾಸುದೇವ ವಾಸುದೇವ ||15|| ಅನುಗಾಲವು ನಿನ್ನ ಅನುಸರಿಸಿದೆ ನಾನು ಅನುಕೂಲವಾಗಿ ಎನ್ನನು ಸಾಕುವುದು ಅನುಮಾನವ್ಯಾತಕೆ ಅನಿಮಿತ್ತ ಬಂಧು ಅನುಪಮ ಚರಿತನೆ ಅನಿರುದ್ಧ ಶ್ರೀಶಾ ||16|| ಪುರುಷ ಪುರುಷ ಶ್ರೇಷ್ಠ ಪುರುಷಾರ್ಥ ಕಾರಣ ಪುರುಷೇಶ್ವರ ತತ್ಪುರುಷಾದಿ ಪುರುಷ ಪುರುಷ ಬೀಜ ವೇದ ಪುರುಷ ಪರಮ ಪುರುಷ ಪುರುಷರು ಮೋಹಿಸುವ ಪುರುಷೋತ್ತಮನೆ ||17|| ಅಕ್ಷಯ ಬಲ ಸಹಸ್ರಾಕ್ಷ ರಕ್ಷಕ ಅಕ್ಷರಪರ ಬ್ರಹ್ಮ ಗೀರ್ವಾಣಧ್ಯಕ್ಷ ಅಕ್ಷಯ ಪಾತ್ರಿಯ ಶಾಖಾದಳವನ್ನು ಅಕ್ಷಯ ಮಾಡಿದಧೋಕ್ಷಜ ಚಕ್ರಿ ||18|| ನರಸಖ ನರಹರಿ ನಾರಾಯಣ ವಾ ನರ ದಳನಾಯಕ ನಾರದ ವಿನುತ ನರಕ ಉದ್ಧಾರಕ ನರಕಾಂತಕ ಕಿ ನ್ನರ ಸುರನರೋರಗ ವೃಂದ ನರಸಿಂಹ ||19|| ಸಚ್ಚಿದಾನಂದಾತ್ಮ ಸಚಲ ವಿಗ್ರಹನೆ ಸಚ್ಚರಾಚರದೊಳೂ ಗುಣಪರಿಪೂರ್ಣ ಸಚ್ಛಾಸ್ತ್ರದಲಿ ನಿನ್ನ ಸಾಮರ್ಥಿ ಪರಿಪೂರ್ತಿ ಸಚ್ಚೂತ ಚುತಿ ದೂರ ಚಿನ್ಮಯ ರೂಪಾ ||20|| ಜನನ ಮರಣ ನಾಶ ಜನನಾದಿಕರ್ತಾಂ ಜನಸುತಗತಿ ಪ್ರೇಮಾಂಜನ ಗಿರಿಧಾಮ ಜನಕವರದ ಸಜ್ಜನರಘದಹನ ದು ರ್ಜನರ ಕುಲರಾತಿ ಜನಾರ್ದನನೆ ||21|| ವೀಂದ್ರವಾಹನ ಮಹೇಂದ್ರಧಾರನೆ ಗ ಜೇಂದ್ರನ್ನ ಬಿಡಿಸಿ ನಕ್ಷೇಂದ್ರನ ಸೀಳಿ ನಾ ಗೇಂದ್ರ ಶಯನ ಗುಣಸಾಂದ್ರ ಗೋಕುಲ ಚಂದ್ರ ಇಂದ್ರಮಣಿ ನಿಭ ರಾಮಚಂದ್ರ ಉಪೇಂದ್ರಾ ||22|| ಹರಿ ಎನುತಾ ಹರಿ ಹರಿದು ಓಡಿ ಬರೆ ಹರಿದು ಪೋಗಿ ಪರಿಹರಿಸಿದ ಖಳನ ಹರಿ ಹರಿಯು ನಲಿವನೆ ಹರಿರೂಪ ಪರಿ ಹರಿನಾಮವೆ ಗತಿ ಹರಿ ಸರ್ವೋತ್ತಮಾ||23|| ಕೃಷ್ಣದ್ವಯಪಾಯನ ಉತ್ಕoಷ್ಟ ಮುನೇಶ ಕೃಷ್ಟಿಗೆ ಬಂದ ಕಷ್ಟ ಓಡಿಸಿದೆ ಕೃಷ್ಣವತ್ರ್ಮನೆ ಸಂತುಷ್ಟೀಲಿ ಸುಖಬಡುವ ಕೃಷ್ಣಾವತಾರ ಕೃಷ್ಣ ಕಮಲೇಶ ||24|| ನಿನ್ನ ಮಹಿಮೆಯನ್ನು ಬಣ್ಣಿಸಲಳವಿಲ್ಲ ನಿನ್ನೊಳಗೆ ನೀನು ಬೀಯ ಬೀಜವನು ಎನ್ನ ಪಾಲಿಸುವುದು ವಿಜಯವಿಠ್ಠಲ ಪ್ರಸನ್ನ ಭಕ್ತರ ವರದ ಬಾಲ ಗೋಪಾಲ ಜೋ ಜೋ ||25||

Thoughts & Reflections

0

No reflections shared yet. Be the first to share your thoughts!

Share your thought