Bhasaka
← Back to home

ಜೋಕುಮಾರನೆಂದು ಪಾಡಿದಳೊ

Author: ವಿಜಯದಾಸCategory: ಶ್ರೀಕೃಷ್ಣ
ಜೋಕುಮಾರನೆಂದು ಪಾಡಿದಳೊ ಲೋಕಮೋಹಿಸುವಂಥ ಹೋಲಿಕೆಯವನ ಗೋಪಿ ಬಾಯಲ್ಲಿ ಬೆಣ್ಣೆ ಬಗೆಬಗೆ ವಯ್ಯಾರ ಕಾಯ ನೋಡಿದರದು ಬಲು ಕಪ್ಪು ಮಾಯದ ವೇಷದವ ಮನೆ ಮನೆ ತಿರುಗುವ ಸ್ತ್ರೀಯರ ಕಾಣುತ ಭಂಡಾಟನಾಡುವ ||1|| ವಾವಿಗಳಿಲ್ಲದವಳ ತಾ ಮಾರಿ ಗಂಡು ಆವಾಗ ಬಂದರಿವ ಇದೆ ತೆರನು ದೇವದಾನವರೊಳಗಿವನೆ ಬಲು ಚಲುವ ಕೇವಲ ನಾಚಿಕೆ ತೊರೆದ ಲಂಡನ್ನ ||2|| ಅಷ್ಟಮಿ ದಿನದಲ್ಲಿ ಒಬ್ಬರ ವಶನಾಗಿ ಬುಟ್ಟಿಯೊಳಗೆಯಿದ್ದು ಹೊರಗೆ ಪೋಪಾ ಪಟ್ಟ ಗುಡುಪಾ ನಮ್ಮ ವಿಜಯವಿಠ್ಠಲರೇಯಾಸೊಟ್ಟವಳನ ಬಿಡದಿಪ್ಪಕುವಲ್ಲಭಾ||3||

Thoughts & Reflections

0

No reflections shared yet. Be the first to share your thoughts!

Share your thought