Bhasaka
← Back to home

ಟೀಕಾಚಾರ್ಯರ ಪಾದ

Author: ವಿಜಯದಾಸCategory: ಇತರೆ
ಟೀಕಾಚಾರ್ಯರ ಪಾದ | ಸೋಕಿದ ಕೊನೆಧೂಳಿ ತಾಕಿದ ಮನುಜರಿಗೆ ಕಾಕುಬುದ್ಧಿಗಳೆಲ್ಲ ಪರಿಹಾರವಾಗುವವೊ | ಬೇಕಾದ ಪದವಿಯ ಕೊಡುವನು ಶ್ರೀ ಹರಿ ಮಧ್ವಮತವೆಂಬ ಅಬ್ಧಿಯೊಳಗೆ ಪೂರ್ಣ | ಉದ್ಭವಿಸಿದ ಚಂದ್ರನಾ ಗುಣಪೂರ್ಣನಾ || ಅದ್ವೈತಮತ ತಮನಿಧಿ ನಿಶಿಕುಠಾರ | ವಿದ್ಯಾರಣ್ಯವ ಗರುವಕೆ ಪರಿಹಾರ ||1|| ತತ್ವ ವಾರಿಧಿಗಳ ತತ್ವಸುಧೆಯ ಭಾಷ್ಯ | ವಿಸ್ತರಿಸಿ ಇರಲು ಬೇಗದಲಿ || ಚಿತ್ರವಲ್ಲಭನ ಸೇವೆಯ ಮಾಡಿ ಟೀಕಂಗಳ || ಸುತ್ತೇಳು ಲೋಕಕ್ಕೆ ಪ್ರಕಟಿಸಿ ಮೆರೆವರ ||2|| ಎಂದಿಗಾದರು ಒಮ್ಮೆ ಕೊನೆ ನಾಲಿಗೆಯಿಂದ | ಬಿಂದು ಮಾತ್ರದಿ ನೆನೆಯೆ || ಮಂದ ಮತಿಯಾದರೂ ಅಜ್ಞಾನನಾಶವು | ಸುಂದೇಹವಿಲ್ಲವು ಅವಾವ ಕಾಲಕ್ಕೆ ||3|| ಜ ಎಂದು ಪೊಗಳಲು ಜಯಶೀಲನಾಗುವ | ಯ ಎನ್ನೆ ಯುಮರಾಯನಂಜುವನು || ತೀ ಎಂದು ಪೊಗಳಲು ತೀವ್ರ ಪದವಿ ಉಂಟು | ರ್ಥ ಎಂದು ಪೊಗಳಲು ತಾಪತ್ರಯುಪಶಮನ ||4|| ಯೋಗಿ ಅಕ್ಷೋಭ್ಯತೀರ್ಥರ ಕರಕಮಲಸಂಜಾತ | ಭಾಗವತರ ಸುಪ್ರೇಮ || ಕಾಗಿಣಿ ತೀರದ ಮಳಖೇಡ ನಿವಾಸಾ | ಶ್ರೀ ಗುರು ವಿಜಯವಿಠ್ಠಲ ಸೇವಕ ಭಕ್ತಾ ||5||

Thoughts & Reflections

0

No reflections shared yet. Be the first to share your thoughts!

Share your thought