Bhasaka
← Back to home

ನನ್ನಪರಾಧವು ಏನೆಲೆ ದೇವ

Author: ಸ್ವಾಮಿ ಹರ್ಷಾನಂದCategory: ಶ್ರೀಕೃಷ್ಣRaaga: ಶಂಕರಾಭರಣTaala: ಆದಿತಾಳ
ನನ್ನಪರಾಧವು ಏನೆಲೆ ದೇವ ಎನ್ನನ್ನು ಕಾಯದೆ ಈಯುವೆ ನೋವ ಭಾರವೆ ನಾನು ಗೋವರ್ಧನಗಿರಿ- ಧಾರಿಯು ಅಲ್ಲವೆ ನೀ ಹೇ ಶ್ರೀಹರಿ || ಕೀರುತಿ ನಿನ್ನದು ಗಜೇಂದ್ರಮೋಕ್ಷದ ಮಾರುತಿಯಾಶ್ರಯ ನಿನ್ನಯ ಪಾದ ಪರಮಪುರುಷ ನೀ ಕೊಡು ತವ ಮೋದ ಪರುಸಮಣಿಯೊಲು ಸರ್ವಾಭೇದ || ದೀನಬಂಧು ನೀ ದೇವದೇವ ನೀ ಮಾನಘನನು ನೀ ಧರ್ಮಾತ್ಮನು ನೀ ಜ್ಞಾನಧನರು ಗುಣಗಾನವ ಗೈಯಲು ಎನ್ನನ್ನು ರಕ್ಷಿಸಲೇಕೀ ದಿಗಿಲು ||

Thoughts & Reflections

0

No reflections shared yet. Be the first to share your thoughts!

Share your thought