Bhasaka
← Back to home

ಡೀ ಡೀ ಅಡೋನೆ ರಂಗ ಡೀ ಡೀ ಆಡೋನೆ

Author: ವಿಜಯದಾಸCategory: ಶ್ರೀಕೃಷ್ಣ
ಡೀ ಡೀ ಅಡೋನೆ ರಂಗ ಡೀ ಡೀ ಆಡೋನೆ | ಓಡಿ ಓಡಿ ಬಂದು ತಲಿಗೆ ನೀ ಡೀ ಡೀ ಡೀ ಎಂದು ಮರಕತ ನವರತ್ನ ವಜ್ರ | ಹರಳು ತೆತ್ತಿಸಿದ ದ್ಯುಮಣಿ || ಕಿರಣ ಮುಕುಟ ಧರಿಸಿದ ಶಿರದಲಿ | ಸರಿ ಸರಿ ಸರಿ ಸರಿ ಹಾಯಿದು ||1|| ಚಂದ್ರಶೇಖರ ಹಂಸವಾಹನ| ಇಂದ್ರಾದ್ಯರಾಕಾಶದಲಿ ಧುಂ ಧುಂ || ಧುಂ ಧುಂ ದುಂದುಭಿ ನುಡಿಸೆ | ಬಂದೆ ಇಕ್ಕೋ ಬಂದೆ ಬಂದೆನುತ ||2|| ಪಿಂತಿರುಗಿ ಪೋಗಿ ನೀನು | ಅಂತರಿಸಿ ದೂರದಿಂದ || ನಿಂತು ವಿಜಯವಿಠ್ಠಲರೇಯಾ ಇತ್ತಿಂ ತ್ತಿಂ ತ್ತಿಂ ತ್ತಿಂ ತ್ತಿಂ ತ್ತೆನುತಲಿ ||3||

Thoughts & Reflections

0

No reflections shared yet. Be the first to share your thoughts!

Share your thought