Bhasaka
← Back to home

ತಿರುದುಂಬುವ ನೀನು ತಿರುಮಲೇಶಾ

Author: ವಿಜಯದಾಸCategory: ಶ್ರೀಕೃಷ್ಣ
ತಿರುದುಂಬುವ ನೀನು ತಿರುಮಲೇಶಾ ಮರುಗಲ್ಯಾತಕೆ ಇನ್ನು ಮನಸಿನೊಳಗೆ ಪ್ರತಿದಿನವು ಬಲಿರಾಯ ಬಲು ದಾನವನು ಮಾಡುತಿರಲಾಗಿ ಇಳಿಯ ಸುರವೇಷವನು ಧರಿಸಿ ಪೋಗಿ ಹಲುಬಿ ಬಾಯಿದೆರದು ತ್ರಿಪಾದ ತಿರಕೆ ಕೊಂಡು ನಿಳಿಯ ಬಾಗಿಲ ಕಾಯ್ದೊ ನಿಗಮ ಕುಲದಾತಾರಾ ||1|| ಗೋಪಳ್ಳಿಯಲಿ ಜನಿಸಿ ಗೋವುಗಳ ಕಾವುತ್ತ ಗೋಪಾಲತತಿ ವಡನೆ ವಡನಾಡುತ ತಾಪಸರು ಯಜ್ಞ ಕರ್ಮಾದಿಗಳು ಮಾಡುತಿರೆ ಶ್ರೀಪತಿ ಅನ್ನ ತಿರಿದುಂಡು ಕ್ಷುದಿಯನ್ನ ಕಳೆದೆ ||2|| ಅಂದು ಈ ಪರಿಯ ಯಾಚಕ ವೃತ್ತಿಯನು ಮಾಡಿ ಇಂದೆನ್ನ ಹೃತ್ಕಮಲದೊಳಗೆ ಬಂದೂ ನಿಂದು ಮನೆಮನೆ ತಿರದುಂಬುವ ನೀನಲ್ಲವೆ ಸಂದೇಹವೇಕೆ ಎನಗೆ ವಿಜಯವಿಠ್ಠಲರೇಯಾ ||3||

Thoughts & Reflections

0

No reflections shared yet. Be the first to share your thoughts!

Share your thought