Bhasaka
← Back to home

ತುರುಕರಿಲ್ಲದ ಮನೆ ದಿರದಿಮ್ಮನೆ

Author: ವಿಜಯದಾಸCategory: ಶ್ರೀರಾಮ
ತುರುಕರಿಲ್ಲದ ಮನೆ ದಿರದಿಮ್ಮನೆ ತುರಕರ ನೋಡದ ಕಣ್ಣು ಶಿಖಿಗರಿಗಣ್ಣು ತುರಕರಿಗೆರಗದ ತಲೆ ಕಗ್ಗತ್ತಲೆ ತುರಕರ ಕಥಾಶ್ರವಣ ಕೇಳದ ಕರ್ಣ ಈಚಲಪರ್ಣ ತುರಕರುವಿನುಚ್ಛಿಷ್ಟ ಉಣ್ಣ ಬಾಯಿ ವಿಷಗಾಯಿ ||1|| ತುರಕರನಾಘ್ರಾಣಿಸದ ಮೂಗು ಅಡವಿಯ ಕೂಗು ತುರಕರಸೇವೆಸದಕರ ವಿಕಾರ ಪಾಮರ ತುರಕರ ಕೊಂಡಾಡದ ಜಿಹ್ವೆ ಅಧಮನ ಗುಂಹೆ ತುರಕರನೊದೆವ ಕಾಲು ಯಮನ ಪಾಲು ||2|| ತುರಕರ ಪ್ರಸಾದ ಉಣ್ಣದ ಹೊಟ್ಟೆ ಗೂಗಿನ ಮೊಟ್ಟೆ ತುರಕರನ ಚಿಂತಿಸದ ಮನ ಗಾರ್ಧಭ ಗಮನ ತುರಕರ ಕಾಯ್ದ ವಿಜಯವಿಠ್ಠಲರೇಯ ತುರಕರ ಕರುಣ ಪಡೆಯದವನು ಶುದ್ಧ ಶವನು||3||

Thoughts & Reflections

0

No reflections shared yet. Be the first to share your thoughts!

Share your thought