Bhasaka
← Back to home

ನನ್ನ ಹೃದಯದ ದಿವ್ಯ

Author: ವಚನವೇದCategory: ಶ್ರೀದೇವಿRaaga: ದೇಸ್Taala: ಝಪತಾಲ
ನನ್ನ ಹೃದಯದ ದಿವ್ಯಸೂತ್ರಧಾರಿಣಿ ನೀನು ಮಡಿಲ ತೊಟ್ಟಿಲೊಳಿಟ್ಟು ಪಾಲಿಸಿರುವೆ | ನಾನಪಾತ್ರನು ತಾಯಿ, ನಿನ್ನ ಒಲವಿನ ಕೃಪೆಗೆ ಆದರೂ ಎನಿತೊಂದು ಕರುಣೆ ನಿನಗೆ || ನನ್ನ ಮೇಲೆನಿತೊಂದು ವಾತ್ಸಲ್ಯವಿದೆ ನಿನಗೆ ನೇವರಿಸಿ ಕೈಹಿಡಿದು ನಡೆಸುತಿರುವೆ | ಮೃದುನುಡಿಗಳಮೃತವನು ಕಿವಿಗಳಿಗೆ ಕರೆಯುತ್ತ ದಿವ್ಯಮಧುವನು ನನಗೆ ಕುಡಿಸುತಿರುವೆ || ದೋಷವರಸದ ಹಿರಿಯ ತಾಯ್ತನದ ಮೂರ್ತಿ ನೀ ಕಷ್ಟಸಂಕಟದಿಂದ ರಕ್ಷಿಸಿರುವೆ | ನಾನು ನಿನ್ನವನೆಂಬ, ನೀನು ನನ್ನವಳೆಂಬ ಹಿರಿಯ ತತ್ವವನೀಗ ಅರಿಯುತಿರುವೆ || ಓ ತಾಯಿ ನಾ ನಿನ್ನ ಹಾಲುಂಡು ಪುಷ್ಟಿಯಲಿ ನಿನ್ನ ಆಣತಿಯಂತೆ ಋಜುಪಥದಲಿ | ನಡೆನಡೆದು ಭಕ್ತಿಯಲಿ 'ಜೈ ಬ್ರಹ್ಮಮಯಿ' ಎಂದು ಹಾಡಿ ಕುಣಿಯುವೆನಿನ್ನು ದಿನದಿನದಲಿ ||

Thoughts & Reflections

0

No reflections shared yet. Be the first to share your thoughts!

Share your thought