Bhasaka
← Back to home

ದಯ ಬಾರದ್ಯಾಕೊ ರಾಘವಾ

Author: ವಿಜಯದಾಸCategory: ಶ್ರೀರಾಮ
ದಯ ಬಾರದ್ಯಾಕೊ ರಾಘವಾ ಕಾಯಬೇಕು ಯೆಂದು ಕೊರಗಿ ಮೊರೆಯಿಡೆ ನ್ಯಾಯವೇನು ಯೆನ್ನ ಮರತುಬಿಡುವದು ಅಂದು ಅಜಮಿಳನು ಅಂತ್ಯಕಾಲದಲ್ಲಿ ಕಂದ ನಾರ ಬಾಯೆಂದು ಕರಿಯಲು ಅಂದ ಮಾತುಗಳಿಗೆ ಅತಿ ಹರುಷಿಸಿ ಬಂದ ಯಮನ ಬಾಧೆ ಬಿಡಿಸಲಿಲ್ಲವೇನೊ ||1|| ಹರಿಯೆ ಗತಿಯೆಂದು ಹೊಗಳು ಕಂದನ ಹರುಷವಿಲ್ಲದೆ ಪಿತ ಕಷ್ಟಪಡಿಸಲು ಊರು ತೋರದಂತಾ ಸ್ತಂಭದಿಂದ ಬಂದು ಮೂರು ಜಗವು ಅರಿಯೆ ಮನ್ನಿಸಲಿಲ್ಲವೇನೊ ||2|| ಸರ್ಪಶಯನನೆ ಸಾರ್ವಭೌಮನೆ ಶೂರ್ಪನಖಿ ನಾಸಿಕ ಶ್ರೋತ್ರವಳಿದನೇ ಅಪ್ಪ ಗುರುವರ ವಿಜಯವಿಠ್ಠಲನೇ ಒಪ್ಪದಿಂದ ವಲಿವ ವರದರಾಜನೇ ||3||

Thoughts & Reflections

0

No reflections shared yet. Be the first to share your thoughts!

Share your thought