Bhasaka
← Back to home

ದಯಮಾಡು ದಯಮಾಡು ಎನ್ನ ಮೇಲೆ

Author: ವಿಜಯದಾಸCategory: ಶ್ರೀಕೃಷ್ಣ
ದಯಮಾಡು ದಯಮಾಡು ಎನ್ನ ಮೇಲೆ | ಅಂತರಂಗದೊಳಿಪ್ಪ ಅಚ್ಚುತಮೂರ್ತಿ ಗಂಧ ಪರಿಮಳ ಕುಸುಮ ಜಾಜಿ ಮಲ್ಲಿಗೆ ಮಾಲೆ | ಮಂದಾರ ಹಾರ ಕೊರಳೊಳಿಡಲೂ || ಚಂದವಿಲ್ಲವೆಂದು ತೆಗೆದು ಬಿಸಾಟಿ ಊರ | ಹಂದಿಯಂದದಿ ಇಲ್ಲಿ ಇಪ್ಪ ನರಗೆ ||1|| ಹೆತ್ತ ತುಪ್ಪ ಸಣ್ಣಶಾವಿಗೆ ಪರಮಾನ್ನ | ಹೆತ್ತತಾಯಿ ತಂದು ಉಣ್ಣ ಬಡಿಸಲು || ಅತ್ತ ಮೊಗವಗಬೆ ತೊತ್ತು ಉಣಬಡಿಸಿದ | ಹೊತ್ತು ಓಗರ ತಿಂದು ಇಪ್ಪೆನೆಂಬ ನರಗೆ ||2|| ತುಂಬಿದ ಹೊಳೆಯಲ್ಲಿ ಹರಿಗೋಲಿಟ್ಟುಕೊಂಡು | ಅಂಬಿಗ ತಡೆಯದೆ ದಾಟಿಸಲು || ಅಂಬುವಾಸನೆ ನೋಡಿ ದಾಟಿ ಪೋಗುವೆನೆಂ | ದೆಂಬ ಮಾನವನಾದೆ ವಿಜಯವಿಠ್ಠಲ ಕರುಣೀ||3||

Thoughts & Reflections

0

No reflections shared yet. Be the first to share your thoughts!

Share your thought