Bhasaka
← Back to home

ದಾಸರ ಭಾಗ್ಯವಿದು ಪುರಂದರ

Author: ವಿಜಯದಾಸCategory: ಇತರೆ
ದಾಸರ ಭಾಗ್ಯವಿದು-ಪುರಂದರ-ದಾಸರ ಭಾಗ್ಯವಿದು ಸರ್ವ-ದೇಶದೊಳು ತುಂಬಿ ಸೂಸುತಲಿದೆ ಭೂಸುರ ಜನುಮದಿ ಬಂದು ಬೆಳೆದು ಉಪ- ದೇಶಗೊಂಡು ಮಧ್ವಮತ ಪೊಂದಿ ಲೇಸಾಗಿ ಭಕ್ತಿ ವಿರಕ್ತಿಜ್ಞಾನದ ವಿ- ಶೇಷವಾಗಿ ನಾ ಬಾಳುವದೆಲ್ಲ ||1|| ಸಜ್ಜನ ಸಂಗತಿ ಮಾಡಿ ದುರುಳಜನ ವರ್ಜನಗೈದು ಸತ್ಕರ್ಮಗಳ ಆರ್ಜಿಸಿ ನಾಮ ಮುದ್ರೆ ಹಗಲು ಇರಳು ನಿ ರ್ಲಜ್ಜನಾಗಿ ನಾ ಬಾಳುವುದೆಲ್ಲ ||2|| ಶ್ರವಣ ಕೀರ್ತನೆ ವಂದನೆ ಸ್ತೋತ್ರ ಹರಿನಾಮ ತವಕದಿಂದ ನುಡಿಯುವ ಕವನ ನವನವ ವಚನವು ಮಂತ್ರ ಸಂಕಲ್ಪವು ಸವಿದು ಸ್ಮರಿಸಿ ನಾ ಬಾಳುವುದೆಲ್ಲ ||3|| ಯಾತ್ರೆ ತೀರ್ಥ ದಿವ್ಯ ದಾನಧರ್ಮಂಗಳು ಕ್ಷೇತ್ರ ಮೆಟ್ಟಿ ಬಹ ಸಂಭ್ರಮವು ಮಿತ್ರರ ಕೂಡಾಡಿ ಹರಿಪರನೆಂದು ಸ- ತ್ಪಾತ್ರನಾಗಿ ನಾ ಬಾಳುವುದೆಲ್ಲ ||4|| ಹರಿದಿನದುಪವಾಸ ಜಾಗರಣೆ ಪಾರಣಿ ಗುರು ಹಿರಿಯರಲಿ ವಿಹಿತಸೇವೆ ಹಿರಿದಾಗಿ ಮಾಡೋಡು ಪರಿಪರಿಯಿಂದಲಿ ಹರುಷದಿಂದಲಿ ನಲಿದಾಡುವುದೆಲ್ಲ ||5|| ಷಡುರಸಭೋಜನ ದಿವ್ಯವಸನ ನಿತ್ಯ ಉಡುವುದು ಹೊದೆವುದು ಹಸನಾಗಿ ತಡೆಯದೆ ಜನರಿಂದ ಪೂಜೆಗೊಂಡು ಸುಖ- ಬಡಿಸುತಿರುವ ವಿಚಿತ್ರಗಳೆಲ್ಲ ||6|| ಮನವೆ ಹಿಗ್ಗದಿರು ಹಿಯ್ಯಾಳಿಕೆಯಿಂದ ಗುಣಿಸಿಕೊ ಸುಖವಾವುದು ಲೇಶ ನಿನಗೆ ಸ್ವತಂತ್ರ ಎಂಬುದು ಕಾಣೆನೆಂದಿಗು ಗುಣನಿಧಿ ವಿಜಯವಿಠ್ಠಲನ ಪ್ರೇರಣೆಯೆಲ್ಲ ||7||

Thoughts & Reflections

0

No reflections shared yet. Be the first to share your thoughts!

Share your thought