Bhasaka
← Back to home

ದಾಸರೆ ಪುರಂದರದಾಸರು

Author: ವಿಜಯದಾಸCategory: ಇತರೆ
ದಾಸರೆ ಪುರಂದರದಾಸರು ಲೇಸಾಗಿ ಎನಗೆ ಸುಮಾರ್ಗವನು ತೋರಿದರು ಅತಿ ಮುಗ್ಧನಾಗಿ ದುರುಳರಾ ದುರಾಚಾರದಲ್ಲಿ ಮತಿಗೆಟ್ಟು ಮಹಿಯೊಳಗೆ ತಿರುಗುತಿರಲೂ ಅತಿ ದಯಾಪರರಾಗಿ ತನ್ನವನಿವನೆಂದು ಹಿತದಲ್ಲಿ ಪೊರೆದು ಕುಮತಿಯ ಬಿಡಿಸಿದರು||1|| ಶಬ್ದಾದಿ ಮೊದಲಾದ ವಿಷಯಂಗಳಾ ಕರ್ಮ ದಬ್ಧ್ದಿಯೊಳಗೆ ಬಿದ್ದು ಪೊರುಳುತಿದ್ದಾ ಲುಬ್ಧಕನ ಕರೆದು ದೃಢವಾಗಿ ಸುಜ್ಞಾನದ ಅಬ್ಧಿಯೊಳಗಿಟ್ಟು ಕರುಣದಲಿ ನೋಡಿದರು ||2|| ಹಿಂದೆ ಏಸೇಸು ಜನ್ಮ ಜನಿಸಿ ಅನ್ಯ ರಿಂದಲಿ ಬಲು ಕಾಲ ನೊಂದ ನರನಾ ತಂದು ವೈರಾಗ್ಯದೊಳು ಪೊಗಸಿ ಸೌಖ್ಯವ ಪರಶಿ ತಂದೆ ಮಕ್ಕಳನು ಸಾಕಿದಂತೆ ಸಾಕಿದರು||3|| ಉಪದೇಶವಿತ್ತರು ಸುಪ್ರೀತಾರ್ಥದಲಿ ಬಂದು ಜಪ ನಿಜಾಸನ ಧ್ಯಾನ ಜ್ಞಾನದಿಂದ ಸಪುತೆರಡು ಲೋಕದ ಒಡೆಯನ್ನ ಪಾದವ ಸಫಲವಾಗುವಂತೆ ಸಾಧನವ ಪೇಳಿದರು ||4|| ದಾರಿದ್ರ ದೋಷವ ಸೇರಿದ ಮಾನವನಿಗೆ ಆರು ಕೊಡದಲೆ ಧೇನು ದೊರಕಿದಂತೆ ಕಾರುಣ್ಯದಲಿ ಗುರು ಪುರಂದರದಾಸರು ಮೂರುತಿ ವಿಜಯವಿಠ್ಠಲನ್ನ ತೋರಿಸಿದರು ||5||

Thoughts & Reflections

0

No reflections shared yet. Be the first to share your thoughts!

Share your thought