Bhasaka
← Back to home

ದೂರ ನೋಡುವರೆ ರಂಗಯ್ಯ ಎನ್ನ

Author: ವಿಜಯದಾಸCategory: ಶ್ರೀಕೃಷ್ಣ
ದೂರ ನೋಡುವರೆ ರಂಗಯ್ಯ ಎನ್ನ ದೂರ ನೋಡುವರೇನೋ ಸಂಸಾರ ಶರಧಿಯೊಳಗೆ ಮುಳುಗಿ ದಾರಿಗಾಣದೆ ನೀನೆ ಗತಿ ಮು-ರಾರಿಯೆಂದು ಸಾರಿದ ಮೇಲೆ ಆಸೆ ಬಿಡದೆಲೊ ಕಾಸುವೀಸಕೆ-ಕ್ಲೇಶ ಘನ್ನವೆಲೊ ಈಶ ಯಾರಿಗೆ ಪೇಳಲೊಶವೆಲೊ-ಶ್ರೀಶ ಎನ್ನ ಮನಸಿನಲ್ಲಿ ಲೇಶಮಾತ್ರ ಭಕುತಿಯಿಲ್ಲ, ಆಸೆ ಬದ್ಧನಾಗಿ ಬಹಳ ಘಾಸಿಪಟ್ಟೆನೊ-ದಾಶರಥಿ ||1|| ಭಕುತಿಯಿಲ್ಲವೊ ಅದರ ಹೊರತು-ಮುಕುತಿಯಿಲ್ಲವೊ ಯುಕುತಿಯಿಂದಲಿ ವಲಿವನಲ್ಲವೊ- ಮುಕುತಿದಾಯಕ ನಿನ್ನ ಕಾಣದೆ ಭಕುತಿಗೋಸುಗ ಪರರ ತುತಿಸಿ, ಕಕುಲಾತಿಯಿಂದಲೆನ್ನ- ಶಕುತಿಯೆಲ್ಲ ನಷ್ಟವಾಯಿತು ||2|| ಪೊರೆಯದಿರುವರೆ ಕರುಣಾಳುಯೆಂಬ-ಬಿರುದ ಬಿಡುವರೆ ಹರಿಯೆ ಯೆನ್ನ ಮರೆತು ಬಿಡುವರೆ- ಕರಿಯು ಹರಿಯೇ ಎಂದು ಕರೆಯೆ ಸಿರಿಗೆ ಪೇಳದೆ ಭರದಿ ಬಂದು, ಪೊರೆದೆಯೆಂಬ ವಾರ್ತೆಕೇಳಿ -ಮರೆಯ ಹೊಕ್ಕೆನೊ ವಿಜಯವಿಠ್ಠಲ ||3||

Thoughts & Reflections

0

No reflections shared yet. Be the first to share your thoughts!

Share your thought