Bhasaka
← Back to home

ದೇವರ ದೇವ ನಿನ್ನ ಬಲವಲ್ಲದೆ

Author: ವಿಜಯದಾಸCategory: ಶ್ರೀಕೃಷ್ಣ
ದೇವರ ದೇವ ನಿನ್ನ ಬಲವಲ್ಲದೆ ಮತ್ತೆ ಆವ ಗ್ರಹಗಳಿಂದಲಿ ಉಂಟು ಎನಗೆ ಇಂದು ನಿನ್ನ ನೆನಹು ಇಂದು ಬಲವೊ ಅರ ವಿಂದ ಪದ ನೋಡುವದು ಅರ್ಕ ಬಲವು ವಂದನ ಗೈದು ಮಂತ್ರಿ ಬಲವೋ ಎನಗೆ ನಿಂದು ಕೊಂಡಾಡುವದು ಕಾವ್ಯ ಬಲವೊ ||1|| ಆರಾಧನೆ ಮಾಡುವುದು ಅಂಗಾರಕನ ಬಲವೊ ಸಾರಿ ಪೇಳುವದೆನಗೆ ಸೌಮ್ಯ ಬಲವೊ ಕಾರುಣ್ಯ ಕಡುಸೋನೆ ಎನಗೆ ಶೌರಿಬಲವೊ ಹಾರೈಸಿ ಹಿಗ್ಗುವದು ರಾಹು ಬಲವೊ ||2|| ಕೇಳುವ ಕಥಾಶ್ರವಣ ಕೇತು ಬಲವೊ ಎನಗೆ ವಾಲಗ ಮಾಡುವದು ತಾರಾಬಲವೊ ಮೂಲೋದರಸು ಸಿರಿ ವಿಜಯವಿಠ್ಠಲ ನಿನ್ನ ಆಳಾಗಿ ಬಾಳುವದು ಸರ್ವಬಲವು ||3||

Thoughts & Reflections

0

No reflections shared yet. Be the first to share your thoughts!

Share your thought