Bhasaka
← Back to home

ದೇಶದೊಳಗೀ ಕ್ಷೇತ್ರ ಬಲು ಉತ್ತಮಾ

Author: ವಿಜಯದಾಸCategory: ಶ್ರೀಕೃಷ್ಣ
ದೇಶದೊಳಗೀ ಕ್ಷೇತ್ರ ಬಲು ಉತ್ತಮಾ ದಾಸೋಹಂ ಎಂದೆನಲು ಗತಿಗೆ ಪಥವ ಕೊಡುವ ಹರಿಸರ್ವೋತ್ತಮನೆಂದು ನೆರಪಿದಂಥ ಮುನಿ ವರನ ಶಾಪದಲಿ ಪಾವಕನು ಬಂದು ಪರಮತಪ ಮಾಡಿದನು ವರವಿತ್ತ ಹರನೊಲಿದು ಧರೆಯೊಳಗೆ ಈ ದೇವನಿ ಪುಷ್ಕರಣಿ ಎನಿಸುವುದು||1|| ದಿವಿಜರಿಗೆ ಸೋತು ದಾನವರು ಶುಕ್ರಗೆ ಹೇಳಿ ಶಿವನೊಲಿಸೆ ಅಮೃತವ ಮಾಳ್ಪೆನೆಂದು ಕವಿ ಇಲ್ಲೆ ತಪಮಾಡೆ ಅಂದು ಸುರಧೇನು ವಾ ಸವನ ಕೈಕೊಳಲು ಶ್ರೀರಾಮನಿಂದಲಿಗತಿ ||2|| ರಾಯ ಋಷಿಗಾಧೇಯು ಬ್ರಹ್ಮತ್ವಗೋಸುಗ ಗಾಯತ್ರಿ ಒಲಿಸಿದನು ಈ ಸಿಲೆಯಲೀ ಆಯು ಉಳ್ಳದರೊಳಗೆ ಇಲ್ಲಿ ಕುಳಿತು ಬಂದು ಗಾಯತ್ರಿ ಮಂತ್ರವನು ಜಪಿಸೆ ನರನು ಮುಕ್ತಾ ||3|| ಅಗಸ್ತೀಶ್ವರವಿಡಿದು ರಾಮಲಿಂಗ ಪರಿಯಂತ ಬಗೆಬಗೆ ತೀರ್ಥ ಎರಡೊಂದು ಪದ್ಮ ಮಿಗೆ ಷೋಡಶಕೋಟಿ ಅರವತ್ತು ಸಾವಿರ ಸೊಗಸಾಗಿವಿಪ್ಪವಿಲ್ಲಿ ಕಾವೇರಿ ಮಧ್ಯದಲ್ಲಿ ||4|| ರಾಮನಾಥನ ಪುರವೆಂಬೊ ಪೆಸರೆ ಉಂಟು ವ್ಯೋಮಕೇಶನು ನಾಲ್ಕು ಹೆಸರಿನಿಂದಾ ತಾ ಮಹೋತ್ಸವದಿಪ್ಪ ವಿಜಯವಿಠ್ಠಲನಂಘ್ರಿತಾಮರಸ ಧ್ಯಾನವನು ಮಾಡುತ ಭಕ್ತರ ಪೊರೆವಾ||5||

Thoughts & Reflections

0

No reflections shared yet. Be the first to share your thoughts!

Share your thought