Bhasaka
← Back to home

ದೋಷವರ್ಜಿತ ಬಾರೈ ವೆಂಕಟೇಶಾ

Author: ವಿಜಯದಾಸCategory: ಶ್ರೀಕೃಷ್ಣ
ದೋಷವರ್ಜಿತ ಬಾರೈ ವೆಂಕಟೇಶಾ ಶ್ರೀನಿವಾಸ ವಾಸವಿಸೂನು ಚರಣರಹಿತ ಪತಿ ತ್ಯಜನೆ ತಥ ಚರಣಪಾಣಿ ಪರಮಾನಂದಾ ಚರಣಾಯುಧನಾದವಗೆ ಸೋಕಿದಳ ಚರಣದಿ ಪಾವನಗೈಸಿದೆ ದೇವಾ||1|| ಪತಿ ಗುರು ಪಿತೃ ಪಿತಾಮಹಾ ದೈ ವತ ಗುರೋರ್ಗುರು ಸ್ವಶುರ ಜಾರಾ ಅತಿಶಯ ಭೂತಿರಭೂತಿ ಎಂದು ಸಂ ತತ ಉಪಾಸ್ಯತನಾಗಿ ಮೆರೆವನೆ ||2|| ಪಂಚಾದಿಗ್ಬರಸ್ಮಿಗಳಲ್ಲಿ ಪೂಜೆ ಪಂಚ ರೂಪದಿ ಕೊಂಬನಾಡಿಸ್ಥ ಪಂಚಜನ ಪಂಚಮೊಗವೇಶ ತಾಳಿದ ಪಂಚ ಕುಸುಮಸಾರ ಮಧು ವಿದ್ಯಮೂರ್ತಿ ||3|| ಹೃದಯಾಖ್ಯಪುರ ಪಂಚದ್ವಾರದಲಿ ನೀ ವಿಧಿ ಭವರಿಂದಾರ್ಚನೆ ಗೊಂಬೆ ಪದುಮಾಷ್ಟ ದಳದಲಿ ಪ್ರಹರೇಯ ತಿರುಗುವ ಸುದರುಶನಾಬ್ಜಾದಿ ಅಷ್ಟಬಾಹು ಚನ್ನಾ ||4|| ಆನಂದೋತ್ಕೃಷ್ಟ ಜ್ಞಾನ ಪೂರ್ಣ ಗುಣಪೂರ್ಣ ಐಶ್ವರ್ಯಾನಂತ ಮೋದಾ ಗಾನೆ ತ್ರಾಣ ಕರ್ತೃ ಪ್ರಣವ ತ್ರಿಚರಣಸ್ತಾ ಎಣಿಸುವೆ ಷಟುಚತು ತ್ರಿಭಿರೂಪಾತ್ಮಾ||5|| ಪದ್ದುಮ ಶಾಂತಸಿಂಹ ಅನಿರುದ್ಧ ಪ್ರದ್ಯುಮ್ನ ಸಂಕರುಷಣ ವಾ ಸುದೇವ ನಾರಾಯಣ ರೂಪಗಳಿಂದ ಹೃದ್ಗತನಾಗಿ ಒಪ್ಪುವ ಮಹಾಮಹಿಮಾ ||6|| ಗೋಕುಲನಾಥ ಗೋವಿಂದ ತಿರುಮಲ ಕಾಕೋದರಾದ್ರಿನಿಲಯ ಸ್ವಾಮಿ ಲೋಕಪಾಲಕ ಸಿರಿ ವಿಜಯವಿಠ್ಠಲ ಪ ರಾಕು ಈ ರಥದೊಳು ಕುಳ್ಳಿ ವೇಗಸಾಗಿ||7||

Thoughts & Reflections

0

No reflections shared yet. Be the first to share your thoughts!

Share your thought