Bhasaka
← Back to home

ಧ್ಯಾನವನು ಮಾಡಿ ತ್ರಿವೇಣಿ ಕ್ಷೇತ್ರವ ಬಿಡದೆ

Author: ವಿಜಯದಾಸCategory: ಶ್ರೀಕೃಷ್ಣ
ಧ್ಯಾನವನು ಮಾಡಿ ತ್ರಿವೇಣಿ ಕ್ಷೇತ್ರವ ಬಿಡದೆ | ಜ್ಞಾನಭಕ್ತಿ ವೈರಾಗ್ಯ ನಾನಾ ಸತ್ಕರ್ಮ ನಿ | ದಾನದಿಂ ಸಿದ್ಧಿಪುದು ಮಾನಸದಲಿ ಸಿರಿ | ಪ್ರಾಣೇಶ ಕುಣಿಯುವನಯ್ಯಾ ಅಯ್ಯಯ್ಯಾ ಹರಿವೀರ ದ್ರುಪದನುದ್ಧರಿಸಿವಾಗಲು ತನ್ನ | ಶರೀರದಿಂದಲಿ ಅಷ್ಟಕೇತ್ರಗಳ ಪುಟ್ಟಿಸಿ | ವರದೇಶ ವೈಕುಂಠದಲ್ಲಿಟ್ಟನು ಸಪ್ತ | ಪಿರಿಸಹಿತ ತೀರ್ಥರಾಜಾ || ಮೆರೆವದಿದೆ ಪುಂ ಕ್ಷೇತ್ರ ಉಳಿದವೇಳು ಸ್ತ್ರೀ | ಇರುತಿಪ್ಪವಲ್ಲಿ ಮಿಗಿಲಿದಾದಕೆ ಅತಿಶಯವೊ | ಧರಣಿಯೊಳಗಿದಿ ಕಾಲಾಂತರಕೆ ಹರಿತಂದ ವಟ | ತರು ಸಹವಾಗಿ ಅಯ್ಯಾ ಅಯ್ಯಾ ಅಯ್ಯಾ ||1|| ತರಣಿಸುತೆ ಮಾನಸೋತ್ತರ ಶೈಲದಲಿ ಕುಳಿತು | ವರರಾಜ ತೀರ್ಥ ಮಾಧವನ ಸಾರುವೆನೆಂದು | ಭರದಿಂದ ತಪವು ಮಾಡೆ ಸರಸಿಜೋದ್ಭವನೊಲಿದು | ವರವಿತ್ತ ಮುಂದೆ ನೀನು ಧರೆಯೊಳು ಕಾಳಿಂ || ದ ರಾಯಗೆ ಕುವರಿ ಎನಿಸಿ ಮಹಾಸರತಿಯಾಗಿ ಪೋಗಿ | ಸಿರಿ ಮಾಧವನ ಚರಣ | ಶರಣು ಪೋಗೆನೆ ಸಪ್ತಶರಧಿ ಭೇದಿಸಿಯಲ್ಲಿ ನೆರೆ ಮೆರೆದಳೈಯ್ಯಾ ಅಯ್ಯಾ ಅಯ್ಯಾ ಅಯ್ಯಾ ||2|| ತುರುಗಮ ನೆವದಿಂದ ಅರವತ್ತು ಸಾವಿರ ಸ | ಗರನ ಕುಲದವರು ಕಪಿಲಾಖ್ಯಾ ಹರಿ ಮುನಿಯಿಂದ | ಉರಿದು ಪೋಗೆನಲಾಗಿ ಭಗೀರಥ ಭೂಪತಿ ಉಗ್ರ | ಧುರಧಿ ತಪವನ್ನೆ ಮಾಡೇ | ಹರಿ ನಿರೂಪವ ತಾಳಿ ಗಿರಿಗಹ್ವರವನೊಡದು | ಸುರಗಂಗೆ ಬಂದು ತ್ರಿವೇಣಿ ಮಾಧವನ ಸಿರಿ | ಚರಣದೆಡೆಯಲ್ಲಿ ನಿಂದು ಯಮುನೆ ವಡಗೊಡಿ ಬಾ | ಮರವಾದವಳಂದು ಅಯ್ಯ ಅಯ್ಯಾ ಅಯ್ಯಾ||3|| ಸರಸ್ವತಿಯ ಬೆರೆದು ತ್ರಿವೇಣಿ ಸಂಗಮವೆಂದು | ಕರಿಸಿಕೊಂಡಿತು ವಿಕರ ಸೋಮೇಶ್ವರನ ತನಕ | ಪರಮೇಷ್ಠಿಯಿಲ್ಲಿಗೈತಂದು ಬೊಮ್ಮಾಂಡವನು | ಸರಿ ಮಾಡಿ ತೊಲಗಲಾಗೀ || ಅವರೇ ಪೇಳುವದೇನು ಸುರರು ಶಿರದೂಗುತಿರೆ | ವರರಾಜತೀರ್ಥ ಮಹಾಭಾರವಾಗಲು ಇದಕೆ | ಸರಿ ಮಿಗಿಲು ಇಲ್ಲೆನುತ ಪೊಗಳಿ ಕರದರು ಮಹ | ವರದ ಪ್ರಯಾಗವೆಂದಯ್ಯಾ ಅಯ್ಯಾ ಅಯ್ಯಾ ||4|| ಪುರವೈರಿ ನಟಣೆ ಪೂ ತುಲಸಿ ಸುರಪತಿ ವೈಶ್ವಾ | ನರನು ತಿಲ ಹೋಮ ಯಮರಾಯಕಿಂಚಿತು ದಾನ | ನಿಋರುತಿತ ಪೈತೃಕಕರ್ಮ ವರುಣ ಜಲದಾನಸ್ತುತಿ | ಮರುತ ಭೂತನು ಕುಬೇರ || ಅರಗಳಿಗೆ ವಸತಿ ಈ ವಟನಿಕಟ್ಟಿಯಲಿಯಿದ್ದು | ಪರಿಪರಿಯಿಂದಲಿ ಒಲಿಸಿ ಮಾಧವನಿಂದ | ಪುರಷಾರ್ಥ ಪಡೆದು ಸುಖಿಸಿದರು ಸಮಸ್ತ ಬಗೆ | ಅರಿತು ಕೊಂಡಾಡಿ ಜನರೈಯ್ಯ ಅಯ್ಯಾ ಅಯ್ಯಾ||5|| ಎರಡೊಂದು ಮೂರು ಕುಲದ ಮಧ್ಯ ನಿಂದು | ಕರ್ತಾರಿಯೊಳಗೆ ಮಿಂದು ಸತ್ಕರ್ಮವನೆಸಗಿ ಭೂ | ಸುರರ ಮೆಚ್ಚಿಸಿ ಮನದಿ ಪಾಪಗಳ ಉಚ್ಚರಿಸಿ | ಕರಣ ನಿರ್ಮಲಿನರಾಗಿ | ನರನಾರಿ ಈರ್ವ ಜನ ವಿಪ್ರ ಚಂಡಾಲ || ಕುಲ ಪರಿಯಂತ ವಪನವೆ ಮುಖ್ಯವೆಂದು ತಿಳಿದು | ಚರಿಸಿದರೆ ಅನಂತ ಜನ್ಮಕ್ಕೆ ಮಹಾಸೌಖ್ಯ | ಬರಿದೆ ಆಗದು ಕಾಣಿರೈಯ್ಯ ಅಯ್ಯ ಅಯ್ಯಾ||6|| ಧರೆಯ ಮೇಲೆ ಬಿದ್ದ ಶಿಶುಗಳ ತಂದು ಮುಂಡಣವ | ಉರುತರ ಬುದ್ದಿಯಿಂದ ಮಾಡಿಸಲಿ ಬೇಕು ವಿ | ಸ್ತರಿಸುವೆನಯ್ಯಾ ಯೌವನ ವಾರ್ಧಿಕರಿಗೆ ನಿಜ | ವರನಾರಿಯರಿಗೆ ವೇಣಿ ಸರಿ ಎನ್ನಿ ಸಾತ್ವೀಕ || ಪುರಾಣದಲಿ ಪೇಳಿದ ಎರಡು ಭುಜದಲಿ ತಪ್ತ ಚಕ್ರ | ವಿರಹಿತರಾಗಿ ಬರಲು ಷಣ್ಮುತ ಜನಕ ಗತಿಯಿಲ್ಲ ಮತಿಯಿಲ್ಲ | ಸ್ಥಿರವಾಕ್ಯ ಲಾಲಿಪುದು ಅಯ್ಯಾ ಅಯ್ಯಾ ಅಯ್ಯಾ ||7|| ಎರಡೈದು ತುರಗ ಕೃತು ಮೊದಲಾದ ತೀರ್ಥಗಳು | ಪರಿಪರಿ ದೇವ ಮುನಿಗಳು ನಾಮದಲಿ ಉಂಟು | ಪರಮಭಕುತಿಯಿಂದ ಮಜ್ಜನಾದಿಯ ಮಾಡೆ | ಪರಲೋಕ ಕರತಳದೊಳು || ಇರುತಿಪ್ಪದು ನಿತ್ಯಾ ಪ್ರಯಾಗರಾಜನ | ಸ್ಮರಣೆ ಮಾಡಿದ ಮನುಜನು ಆವಾವಲ್ಲ್ಯಾದರು ಇರಲು | ಮರಣ ಕಾಲಕೆ ಮೂಲ ಮಾಧವ ವೊಳಗೆ ಮೊಳೆವ | ದರುಶನವ ಕೊಡುತಲಯ್ಯ ಅಯ್ಯಾ ಅಯ್ಯಾ ||8|| ಅರುಣೋದಯಲೆದ್ದು ಶುದ್ಧಾತ್ಮರಾಗಿ | ಪರಿಪರನೆಂಬೊ ಙÁ್ಞನದಲಿ ಹಾಡಿಪಾಡಿದವರ | ತೆರಳಿ ಪೋಗದೆ ದುರಿತ ರಾಸಿಗಳ ದಹಿಸಿ ನಿಂ | ದಿರದೆ ಸಂತರ ಕೊಡಿಸಿ || ಮೊರೆವುತಿಪ್ಪುದು ಗಡಾ ಸಿದ್ದಾರ್ಥ ಕ್ಷೇತ್ರವಿದು | ನೆರೆನಂಬಿ ಮಾನವನು ಮಾನಸದಲಿ ಭಜಿಸಿ | ಸಿರಿ ವಿಜಯವಿಠ್ಠಲ ಕರುಣವುಳ್ಳವನಿಗೆ | ದೊರಕುವದು ದೊರಕುವದಯ್ಯಾ ಅಯ್ಯಾ ಅಯ್ಯಾ ||9||

Thoughts & Reflections

0

No reflections shared yet. Be the first to share your thoughts!

Share your thought