Bhasaka
← Back to home

ನಂಬಿ ನೆಚ್ಚದಿರು ನರಲೋಕ

Author: ವಿಜಯದಾಸCategory: ಶ್ರೀಕೃಷ್ಣ
ನಂಬಿ ನೆಚ್ಚದಿರು ನರಲೋಕ ಸುಖವೆಂಬ, ಅಂಬಲಿ ಪರಮಾನ್ನ ಹಂಬಲಿಸುವುದು ಹರಿಲೋಕಾನಂದವೆಂಬ ಪೀಯೂಷಪಾನ ದುರುಳಜನರ ಸಂಗವೆಂಬುದು ಎಂದಿಗೂ ನೊಣ ಬೆರಸಿದ ಊಟ ಪರಮಭಾಗವತರ ಪದಸಂಗವೆಂಬುದು ಮಸ್ತಕದ ಮಕುಟ ಮರೆ ಮೋಸಗೊಳಿಸುವ ಸತಿಸುತರೆಂಬೋದೆ ಕೇವಲ ಯಮಕಾಟ ಪರತತ್ವವಾದ ಶ್ರೀಹರಿಯ ತಿಳಿವುದೆ ವೈಕುಂಠಕೆ ಓಟ ||1|| ಬಿದ್ದ ಕಾಳಿಗೆ ಕಾಳು ಕೂಡಿ ಹಾಕುವುದೆಲ್ಲ, ಹಾರಿ ಹೋಗುವ ಹೊಟ್ಟು ಇದ್ದಾಗ ದಾನ ಧರ್ಮಂಗಳ ಮಾಡೋಡು ಕೈವಲ್ಯಕೆ ಮೆಟ್ಟು ಹೊದ್ದಿರುವರ ಕಂಡಾಸೆಯಪಟ್ಟರೆ ಹೋಗುವಿ ನೀ ಕೆಟ್ಟು ಬುದ್ಧಿಹೀನರಿಗೆ ಪೇಳದಿರೆಲೊ ತತ್ವಸಾರ ಸುಂದರ ಗುಟ್ಟು ||2|| ಅಲ್ಪಾವಕಾಶವು ಈ ಶರೀರವು ಗಾಳಿಗೊಡ್ಡಿದ ದೀಪ ಅಲ್ಪ ಸಂತೋಷನಾಗು ಅದು ನಿನಗೆ ನೋಡು ಹಾಲುಸಕ್ಕರೆ ತುಪ್ಪ ಬಲ್ಪಂಥ ಮಾಡದಿರು ಜನ್ಮಜನ್ಮದಲಿ ಬಿಡದೆಲೊ ಸಂತಾಪ ಸ್ವಲ್ಪಕಾಲಾದರೂ ಮಧ್ವಮತವೊಂದು ಭವವೇ ನಿರ್ಲೇಪ||3|| ಹರಿಗರ್ಪಿಸದ ಕರ್ಮ ಆವುದಾದರು ಸೂಳೆಗಿಕ್ಕ್ಕಿದ ವಿತ್ತ ಹರಿಗೆ ವಿಶ್ವಾಸದಿ ಅಣುಮಾತ್ರ ಅರ್ಪಿಸೆ ಅವನೆ ನಿರ್ಮಲ ಚಿತ್ತ ನಿರುತಗ್ರಾಸಕೆ ಚಿಂತೆಮಾಡಲು ಒದಗದು ಪುಣ್ಯವು ನಿನಗೆತ್ತ ಅರೆಮನವಿಲ್ಲದೆ ದೃಢಮನದಿಪ್ಪುದೆ ಸಂಪಾದನೆ ಭತ್ಯ||4|| ಭಾವವಿರಕ್ತಿಯ ವಹಿಸದಿದ್ದರೆ ನಿನಗಾಗುವುದು ಖೇದ ಸಾವಿರಕೊಂದೆ ಮಾತು ಹರಿದಾಸನೆನಿಸೋದು ಪರಿಪರಿಯಾಸ್ವಾದ ದೇವಕಿಸುತ ನಮ್ಮ ವಿಜಯವಿಠ್ಠಲನಂಘ್ರಿ ತೀರುಥ ಪ್ರಾಸಾದ ಸೇವಿಸದವನೆ ನಿತ್ಯ ನರಕವಾಸ ಎನ್ನತಲಿದೆ ವೇದ ||5||

Thoughts & Reflections

0

No reflections shared yet. Be the first to share your thoughts!

Share your thought