Bhasaka
← Back to home

ನಂಬಿದೆ ನಿನ್ನ ನೀರಜಪಾದ

Author: ವಿಜಯದಾಸCategory: ಶ್ರೀಕೃಷ್ಣ
ನಂಬಿದೆ ನಿನ್ನ ನೀರಜಪಾದ | ಇಂಬಿನಲ್ಲಿಟ್ಟು ಸಲಹೊ ಪ್ರಸಾದ ಅಂಬರೀಷನ ಶಾಪ ಹಿಂಗಿಸಿ ಕಳೆದ ದ- | ಯಾಂಬುಧಿ ನೀನೆಂದು ಹಂಬಲಿಸಿದೆ ಹರಿಯೆ ಉಗ್ರನ್ನ ಖಳವಂಚಿಸಿ ತನ್ನ ಕ- | ರಾಗ್ರವಾ ಶಿರದಲ್ಲಿ ಇಡಬರಲು || ಅಗ್ರೇಶ ಕಾಯೆಂದು ಅವನೀಗ ಮೊರೆಯಿಡೆ | ಶೀಘ್ರದಿಂದಲಿ ಬಂದು ಕಾಯ್ದು ಕರುಣಿಯೆಂದು||1|| ಕಾಲದೂತರು ಅಜಾಮಿಳನೆಳೆಯಲು | ನಾಲಿಗೆಯಿಂದ ನಾರಗನೆನ್ನಲು || ಆಲಸ್ಯ ಮಾಡದೆ ನಿನ್ನ ದೂತರನಟ್ಟಿ | ಓಲಗ ವೈಕುಂಠವಿತ್ತ ಭಾಂದವನೆಂದು ||2|| ಭೂತಳದೊಳು ನಿನ್ನನು ಪೋಲುವ | ದಾತರ ನಾನೆಲ್ಲಿ ಕಾಣೆ ಶ್ವೇತವಾಹನ || ಮಸ್ತಕವನು ಉಳುಹಿದ ದಾತ | ವಿಜಯವಿಠ್ಠಲನಹುದೆಂದು ದೃಢವಾಗಿ ||3||

Thoughts & Reflections

0

No reflections shared yet. Be the first to share your thoughts!

Share your thought