ॐ
ನಂಬಿದೆ ನಿನ್ನ ಪಾದವ ಕಾಣಬೇಕೆಂದು
ಹಂಬಲಿಸಿದೆ ಮಾಧವ
ಬೆಂಬಲವಾಗು ಪೀತಾಂಬರಧರ ಕುಟುಂಬಿ ಪಾಲಾ
ಕಮಲಾಂಬಕ ರಂಗಾ
ಚಂದಿರಹಾಸ ಸರ್ವೇಶ ಚಂಡ ಪ್ರಕಾಶಾ
ಇಂದಿರಾ ಮನೋವಿಲಾಸ
ಮಂದಿರ ವೈಕುಂಠವಾಸಾ ಮನಜವೇಷ
ವೃಂದಾರಕರ ನಿಜಕೋಶಾ
ಮಂದರಧರ ವಸುಂಧರಪತಿ ಪುರಂದರ
ವಂದಿತ ಸುಂದರಾಂಗ ಕಂಬು
ಕಂಧರ ಎನ್ನಯ ಒಂದರಗಳಿಗೆ ಕಂದನ
ಇಂದೀಗ ತೊಂದರೆಕಿಡದಿರು ||1||
ತಂದಿತಾಯಿಗಳವರಾರೊ ತಾವಳಿದು
ತಂದ ಸತಿ ನಂದನರೊ ಬಂಧುಬಳಗ ಮತ್ತಾರೊ ಬರಿದೆ ಊರು
ಪೊಂದದೆನಲೊ ಇಳಿಜಾರು ಎಂದೆಂದಿಗಿದರ
ಗಂಧದೊಳಗೆ ನಾ ಬಂದು ಬಳಲಿ ಸಂ
ಬಂಧದೊಳುರಳಿದೆ ಮುಂದಾದರು ದಾರಿ ಒಂದಾದರು ಕಾಣೆ
ತಂದೆ ತಾಯಿ ಸರ್ವಂದವು ನೀನೆ ||2||
ನೊಂದೆನೊ ನಾನಾ ಜೀವಿಲಿ ನೋಡು ನೋವಿನಲಿ
ಕುಂದಿದೆ ಎಲ್ಲ ಕಾವಿಲಿ
ಹಿಂದಿನ ಹುಟ್ಟು ಸಾವಿಲಿ ಗಹನ ಠಾವಿಲಿ
ಬೆಂದೆನೋ ಬಲು ಕೋವಿಲಿ
ಅಂದದರ್ಚನೆಯಿಂದ ಮಾಡಿದ ಪಾಪಗೊಂದಿಗೆಳೆದು ಎನ್ನ
ಕೊಂದು ಕೊಲ್ಲುತಲಿವೆ ಇಂದು ಚರಣರವಿಂದವ ತೋರಿಸುವ
ಬಂಧು ವಿಜಯವಿಠ್ಠಲೆಂದಹುದೆಂದು ||3||
Thoughts & Reflections
0No reflections shared yet. Be the first to share your thoughts!