Bhasaka
← Back to home

ನಂಬಿದೆನೊ ನಂಬಿದೆನೊ ಅಂಬುಜಾಕ್ಷ

Author: ವಿಜಯದಾಸCategory: ಶ್ರೀಕೃಷ್ಣ
ನಂಬಿದೆನೊ ನಂಬಿದೆನೊ ಅಂಬುಜಾಕ್ಷ ತೊಂಬಲಿಗೆ ಹಂಬಲಿಸಿ ಹಾರೈಸಿದೆ ನಿನ್ನ ಮೊದಲುಂಡ ಪಾಪದಲಿ ಕಳೆಗುಂದಿ ಕಳೆಗುಂದಿ ಮುದದಿಂದ ನಿತ್ರಾಣನಾದೆನಯ್ಯಾ ಪದುಮನಾಭನೆ ನಿನ್ನಭಯದೊಂಬಲನಿತ್ತು ವದನ ಚೇತನನಾಗುವಂತೆ ದಯಮಾಡೊ ||1|| ವಿಷವ ಸೇವಿಸಿದ ತರುಣನಂತೆ ಮೆಲವು ಭಾವಿಸದೆ ಬೀಳುತೀ ನೀ ನೆಲೆಗಾಣದೆ ಬಿಸಿಜಾಕ್ಷ ನೀನೆ ಕೃಪಾಳು ಎಂದೆಂದಿಗೆ ರಸ ಸುರಿವ ಸುರಿವ ಬಾಯದೊಂಬಲಾನಿತ್ತು ಸಲಹೊ||2|| ಆವದಾದರುವಲ್ಲೆ ಅನಿಮಿತ್ತ ಬಂಧು ಕೇಳು ಜೀವವೇ ನಿನ್ನ ಪಾದದಾಧೀನವೋ ಶ್ರೀವಧುರಮಣ ನಮ್ಮ ವಿಜಯವಿಠ್ಠಲ ನೀನೆ ದೇವ ಯನಗ ಹುದು ತೊಂಬಲನಿತ್ತು ಪೊರಿಯೊ ||3||

Thoughts & Reflections

0

No reflections shared yet. Be the first to share your thoughts!

Share your thought