Bhasaka
← Back to home

ನಂಬಿದೆನೊ ನಿನ್ನ ಪಾದಾರವಿಂದಾ

Author: ವಿಜಯದಾಸCategory: ಶ್ರೀಕೃಷ್ಣ
ನಂಬಿದೆನೊ ನಿನ್ನ ಪಾದಾರವಿಂದಾ ಇಂಬು ಈವದು ಎನಗೆ ವೈಕುಂಠಪುರದೊಳಗೆ ಮಲಭಾಂಡದಲ್ಲಿ ಪೊಕ್ಕು ನೆಲೆಗಾಣದಲೆ ಸಿಕ್ಕು ಸಲೆ ಸೊರಗಿ ತಿರುಗಿದೆನೊ ಬಳಲಿ ಮರುಗಿ ಉಳಿವದಕುಪಾಯವನು ಒಂದರೆ ಕಾಣೆನೊ ಎಲೊ ಬಲುದೈವ ನೀನೆ ದಯಾಳು ಎಂದೂ ||1|| ಕಂಡಮಾರುತದಲ್ಲಿ ಕೈವಲ್ಯ ಕೊಡುವಲ್ಲಿ ಮಂಡಲದೊಳು ಎಣಿಯಾರು ನಿನಗೆ ಭಂಡಕಾಯವ ತೆತ್ತು ಬರಲಾರೆ ನಿನ್ನ ತೊತ್ತು ತೋಂಡರೊಳು ಇಡು ನಿತ್ಯ ಎಳೆನೋಟದಲಿ ನೋಡು ||2|| ಯದುಕುಲಲಲಾಮ ಸುರಸಾರ್ವಭೌಮ ಮಹಿಮ ಮದನಪಿತ ಕಾಳಿಂಗಭಂಗ ರಂಗಾ ಮಧುಸೂದನ ವಿಜಯವಿಠ್ಠಲ ಲಕುಮಿನಲ್ಲಾ ಹೃದಯದೊಳು ಪೊಳೆವ ಬಲು ವಿಚಿತ್ರ ಚಲುವಾ ||3||

Thoughts & Reflections

0

No reflections shared yet. Be the first to share your thoughts!

Share your thought