Bhasaka
← Back to home

ನಂಬಿದೇ ನಿನ್ನಯ ಪಾದ ಮುಖ್ಯ ಪ್ರಾಣಾ

Author: ವಿಜಯದಾಸCategory: ಶ್ರೀಕೃಷ್ಣ
ನಂಬಿದೇ ನಿನ್ನಯ ಪಾದ ಮುಖ್ಯ ಪ್ರಾಣಾ ನಂಬಿದೇ ನಿನ್ನಯ ಪಾದಾ ಡಂಬರ ತೊಲಗಿಸಿ ಡಿಂಬದೊಳಗೆ ಹರಿಯ ಬಿಂಬ ಪೊಳೆವಂತೆ ಮಾಡೊ ಇಪ್ಪತ್ತು ಒಂದು ಸಾವಿರ ಐದೊಂದು ನೂರು ಅಪ್ರತಿಹಂಸಮಂತ್ರ ತಪ್ಪದೆ ದಿನದಿನ ಒಪ್ಪದಿಂದಲಿ ಭಜಿಸಿ ತಪ್ಪಿಸೋ ಭವವಾ ಸ ಮೀಪದ ಜೀವ ಕೊ ಅಪ್ಪನಂದದಿ ಪುಣ್ಯ ವಪ್ಪಂತೆ ಕರುಣಿಸೊ ಕಪ್ಪುವರ್ಣನ ಕೂಡಪ್ಪಿಸಿ ಪಾಲಿಸೋ ||1|| ಹತ್ತೇಳು ಎರಡಾಯುತ ನಾಡಿಯೊಳು ಸುತ್ತಿ ಸೂತ್ರವ ಮಾರುತಾ ಉತ್ತರ ಪಾಲಿಸೋ ಉತ್ಕ್ರಮಣದಲ್ಲಿ ನೆತ್ತಿಯದ್ವಾರದಿಂದ ಎತ್ತಮರಿಯಲೀ ಸದದೆ ತತ್ತುವರೊಳು ಜೀವೋ ತ್ತಮನೆ ಸತ್ ಚಿತ್ ಎನಗೆ ಕೊಡು ಉತ್ತರ ಧರಿಸೋ ||2|| ಅಂತರಂಗದಿ ಉಸುರಾ ಹೊರಗೆ ಬಿಟ್ಟು ಅಂತರಂಗಕ್ಕೆ ಸೇರುವ ಪಂಥದೊಳು ನೀನೆ ಕಂತುಜನಕನಲ್ಲಿ ಮಂತ್ರಿ ಎನಿಸಿ ಸರ್ವ ರಂತರ್ಯಾಮಿ ಆಗಿ ನಿಂತು ನಾನಾಬಗೆ ತಂತು ನಡಿಸುವ ಹೊಂತಕಾರಿ ಗುಣವಂತ ಬಲಾಢ್ಯ ||3|| ಪಂಚಪರಣ ರೂಪನೆ ಸತ್ವ ಕಾಯಾ ಪಂಚೇಂದ್ರಿಯಗಳ ಲೋಪನೆ ಮುಂಚಿನ ಪರಮೇಷ್ಟಿ ಸಂಚಿತಾಗಾಮಿ ಬಿಡಿಸಿ ಕೊಂಚ ಮಾಡೋ ಪ್ರಾರಬ್ಧ ವಂಚನೆ ನೆನೆದೊ ಅಂಚಗಂಚಿಗೆ ಪರಪಂಚವೆ ಓಡಿಸಿ ಪಂಚವಕ್ತ್ರ ಹರಿ ಮಂಚದ ಗುರುವೇ ||4|| ಯೋಗಾಸನದೊಳಿಪ್ಪ ಯಂತ್ರೋದ್ಧಾರಾ ಭಾಗವತರಪ್ಪಾ ಯೋಗಿಗಳೀಶಾ ವ್ಯಾಸಾ ಯೋಗಿಗೊಲಿದ ವ್ಯಾಸಾ ಶ್ರೀ ತುಂಗಭದ್ರಾ ವಾಸಾ ಬಾಗುವೆ ಕೊಡು ಲೇಸಾ ಶ್ರೀಗುರು ವಿಜಯವಿಠ್ಠಲನ ಪಾದಕೆಬಾಗುವ ಭವದೂರ ಜಾಗರ ಮೂರುತಿ||5||

Thoughts & Reflections

0

No reflections shared yet. Be the first to share your thoughts!

Share your thought