Bhasaka
← Back to home

ನಾನಾರ ದೂಷಿಸಲಿ

Author: ವಚನವೇದCategory: ವೈರಾಗ್ಯRaaga: ಮುಲ್ತಾನೀTaala: ಝಪತಾಲ
ನಾನಾರ ದೂಷಿಸಲಿ, ನಾನೆ ತೋಡಿದ ಕೂಪ- ದಾಳದಲಿ ನಾನಾಗಿ ಮುಳುಗುತಿಹೆನು | ಅರಿವರ್ಗಗಳ ಹಿಡಿದು ನಿನ್ನ ಸುಕ್ಷೇತ್ರದಲಿ ನಾನೆ ಈ ಬಾವಿಯನು ತೋಡಿರುವೆನು | ಕಾಲರೂಪದ ಕರಿಯ ನೀರೆದ್ದು ನುಗ್ಗುತಿದೆ ಓ ತಾಯಿ ನಾ ನಿನಗೆ ಶರಣೆನುವೆನು | ನಾನೆಯೇ ನನಗೆ ಹಗೆ , ಹೇಗೆ ತಡೆಯಲಿ ಹೇಳು ಮೇಲೆದ್ದು ನುಗ್ಗುವೀ ಕಾಳಜಲವ ? ಎನ್ನ ಎದೆಯುದ್ದಕೂ ತುಂಬಿಕೊಂಡಿತು ನೀರು, ನೀನಲ್ಲದಿನ್ನಾರು ರಕ್ಷಿಸುವರು ? ನೀನೊಬ್ಬಳೇ ರಕ್ಷೆ, ನಿನ್ನೊಳಗೆ ಈ ಭಿಕ್ಷೆ, ದಾಟಿಸಾಚೆಯ ದಡಕೆ ಈ ಶಿಶುವನು |

Thoughts & Reflections

0

No reflections shared yet. Be the first to share your thoughts!

Share your thought