Bhasaka
← Back to home

ನಂಬಿದ್ದೆನೆಲೊ ದಾತ ಅಂಬುಜಾಸನ

Author: ವಿಜಯದಾಸCategory: ಶ್ರೀಕೃಷ್ಣ
ನಂಬಿದ್ದೆನೆಲೊ ದಾತ ಅಂಬುಜಾಸನ ತಾತ ಕುಂಭಿಣಿಯೊಳು ಪುಟ್ಟಿ ಜನನಿಯ ಮೊಲೆ ಪಾಲು ಉಂಬೋದು ಬಿಡಿಸೊ ಜನನವ ಕೆಡಿಸೊ ರಸಿಕೆ ಮುಹಕದಲಿ ನಿಶಿದಿನದಲಿ ಹೊರಳಿ ಅಸುರುಸುರೆನುತಲಿ ಹಸಗೇಡಿಯಾದೆನೊ ಅಸವು ನನ್ನದು ಎಂದು ಈ ಪರಿ ನೊಂದು ||1|| ಹಲವು ಲಂಪಟದೊಳು ಹಲುಬಿ ಹಕ್ಕಲನಾದೆ ಬಲೆಯೊಳಗಿದ್ದ ಎರಳೆಯಂತೆ ಮಿಡುಕುತ ಮಲಮೂತ್ರದೊಳು ಬಳಲಿದೆ ಕೇಳೊ ||2|| ಎಳ್ಳನಿತು ಸತ್ಕರ್ಮವುಳ್ಳದ್ದು ಚರಿಸಿದೆ ಬಲಿಷ್ಠ ನಾನೆಂದು ಬಲು ದುರ್ಮತಿಯಿಂದ ಎಲ್ಲರ ಜರಿದೆ ಧರ್ಮವ ಮರೆದೆ ||3|| ಚಾರುವಾಕರಗೂಡಿ ಮೂರೆ ವಿಕಾರದಲ್ಲಿ ನೀರೇರ ಒಡಗೂಡಿ ನೀತಿ ನಿರ್ಣಯ ತೊರೆದು ತಾರಿ ಬರಿದೆ ಕೆಟ್ಟೆ ಮುಂದೇನು ಬಟ್ಟೆ ||4|| ಎಲ್ಲಿರಲು ನಿನ್ನವನೋ ಅಲ್ಲವೆಂದೆನಿಸದೆ ಬಲ್ಲಿದರೊಡಿಯ ವಿಜಯವಿಠ್ಠಲ ನಿ ನ್ನಲ್ಲಿ ಸೇರಿಸಿ ಎನ್ನ ಪೊರೆಯೋ ಪ್ರಸನ್ನಾ ||5||

Thoughts & Reflections

0

No reflections shared yet. Be the first to share your thoughts!

Share your thought