Bhasaka
← Back to home

ನಮೋ ನಮೋ ಜಯ ತುಂಗಭದ್ರೆ

Author: ವಿಜಯದಾಸCategory: ಶ್ರೀದೇವಿ
ನಮೋ ನಮೋ ಜಯ ತುಂಗಭದ್ರೆ ನಮಿತರನು ಪಾಲಿಸುವ ಸದ್ಗುಣ ಸಮುದ್ರೆ ವೈರಾಚ ನಗರಿಯಲಿ ವಿಧಾರುಣಿಯ ರೋಚಕನು ಮೀರಿ ದೇವಾದಿಗಳಿಗಂಜದಿರಲು ಘೋರ ರೂಪವ ತಾಳಿ ಅವನ ಕೊಲ್ಲಲು ಹರಿಯ ಮೋರೆ ಕರಿಬೆವರಿಡಲು ಅತಿ ಹರುಷದಿಂದ ||1|| ರೂಢಿಯೊಳಗೆಲ್ಲ ಸಮಸ್ತ ನದಿ ಉದಕಗಳು ನೋಡಿದರು ರುಚಿಕರವಿಲ್ಲವೆಂದೂ ದಾಡಿಯಲಿ ಧರಿಸಿದನು ಸುರರು ಕೊಂಡಾಡುತಿರೆ ಈಡ್ಯಾರು ನಿನ್ನ ಮಹಿಮೆಗೆ ವರಹತನಯೇ ||2|| ಸಲಿಲವೇ ಹರಿಯಾದ ಶಿವ ನಿನಗೆ ಶಿಲೆಯಾದ ಬಲು ಮುನಿಗಳು ಮಳಲವಳಗಾದರೂ ಜಲಜ ಸಂಭವನು ತೃಣನಾದ ಬಳಿಕ ವಿಷ್ಣು ಕೆಲವುಕಾಲ ನಿನ್ನೊಳಗೆ ನಿಲಿಸಿದನು ತುಂಗೆ ಗಂಗೆ||3|| ವೇದಾದ್ರಿಯಲಿ ಜನಿಸಿ ನರಸಿಂಹ ಕ್ಷೇತ್ರದಲಿ ಭೇದವಿಲ್ಲದಲೆ ಸಂಗಮವು ಎನಿಸೀ ಆದರದಿಂದ ಹರಹರ ಪೊಂಪ ಬಲಗೊಂಡು ಮೊದಲು ಶ್ರೀ ಕೃಷ್ಣ ಬೆರದೆ ಕೂಡಲಿಯೊಳು ||4|| ತುಂಗೆ ತುಂಗೆ ಎಂದು ಸ್ಮರಿಸುವಾ ಜನರಿಗು ತ್ತಂಗ ಗತಿಯಾಗುವುದು ಪಾಪವಳಿದು ಮಂಗಳ ಮೂರುತಿ ವಿಜಯವಿಠ್ಠಲನ ಚರಣಂಗಳಲಿ ಇದ್ದವರ ಸತತ ಪೊರೆವುದು ದೇವಿ ||5||

Thoughts & Reflections

0

No reflections shared yet. Be the first to share your thoughts!

Share your thought