Bhasaka
← Back to home

ನಮೋ ನಮೋ ನಾರಾಯಣ ನಮೋ

Author: ವಿಜಯದಾಸCategory: ಶ್ರೀಕೃಷ್ಣ
ನಮೋ ನಮೋ ನಾರಾಯಣ ನಮೋ ಶ್ರುತಿ ನಾರಾಯಣ ನಮೋ ಬಾದರಾಯಣ ನರನ ಪ್ರಾಣ ಶಿವನ ಮೋದದಲಿ ಪಡೆದೆ ಶಿವರೂಪದಲಿ ನಿಂದೆ ಶಿವನೊಳಗೆ ಏರಿದೆ ಶಿವನಿಗೊಲಿದೆ ಶಿವಗೆ ನೀ ಮಗನಾದೆ ಶಿವ ತಾತನೆನೆಸಿದೆ ಶಿವನ ಮಗನಾ ಪಡೆದೆ ಶಿವನ ಕಾಯ್ದೆ||1|| ಶಿವಗೆ ಸಹಾಯಕನಾದೆ ಶಿವನ ಕಂಗಡಿಸಿದೆ ಶಿವನ ಧನುವನು ಮುರಿದೆ ಶಿವನೊಲಿಸಿದೆ ಶಿವನ ಜಡ ಮಾಡಿದೆ ಶಿವನ ಒಡನೆ ಬಂದೆ ಶಿವಮುನಿಗೆ ಉಣಿಸಿದೇ ಕೇಶವನೆನಿಸಿದೇ ||2|| ಶಿವನ ಜಡೆಯೊಳಗಿದ್ದ ಶಿವಗಂಗೆಯ ಪೆತ್ತೆ ಶಿವನ ಕೂಡಲಿ ಕಾದಿದವನ ಭಾವ ಶಿವ ಭಕ್ತನ್ನ ನಿನ್ನವನಿಂದ ಕೊಲ್ಲಿಸಿದೆ ಶಿವನ ಶೈಲವನೆತ್ತಿದವನ ವೈರಿ||3|| ಶಿವ ನುಂಗಿದದ ನುಂಗಿದವನ ಒಡನಾಡುವ ಶಿವ ಪರಾಶಿವ ನಿನ್ನ ಶಿವ ಬಲ್ಲನೇ ಶಿವ ಕೊಳದವರ ಉದ್ಭವ ಮಾಡುವೆನೆಂದು ಯವೆ ಇಡುವನಿತರೊಳಗೆ ಧವಳ ಹಾಸಾ||4|| ಶಿವನ ಮೇಲಿದ್ದ ಸಹಭವೆ ರಮಣ ಸರ್ವದಾ ಶಿವನೊಳಗಿಳಿದ ಶಿಷ್ಯನಿವ ಹರಾತೀ ಶಿವ ಭೂಷಣ ತಲ್ಪ ಶಿವ ಸಮಾನಿಕ ರೂಢ ಶಿವನ ಮನೆ ತೊಲಗಿಸುವ ಶಿವ ಬಾಂಧವಾ ||5|| ಶಿವನ ಧೊರಿಯೆ ಜ್ಞಾನ ಶಿವ ಹಚ್ಚುವದೆ ಕೊಡು ಶಿವಮಣಿ ಎನಿಸುವ ಸ್ತವ ಪ್ರಿಯನೇ ಶಿವನು ವಾಹನ ವೈರ ಶಿರವ ತರಿಸಿದೆ ದೇವ ಶಿವ ಪ್ರತಿಷ್ಠಿಸಿದೆ ಶಿವಗೆ ಕಾಣಿಸದಿಪ್ಪೆ||6|| ಶಿವನ ಸೋಲಿಸಿದವನ ಜವಗೆಡಿಸಿದೆ ಶಿವನು ಕುದರಿಯ ಹೆರವ ಅವನು ಕಾಯಿದ ಗೋವ ಶಿವನವತಾರ ಶಸ್ತ್ರವನು ಹಳಿದೆ ||7|| ಶಿವನಧರ್ನಾಗಿ ದಾನವನು ಕೊಂದ ಮಹಿಮಾ ಶಿವಋಷಿ ಪೇಳಿದ ಯುವತಿ ರಮಣಾ ಶಿವನ ವೀರ್ಯವ ಧರಿಸಿದವನ ಮುಖದಲಿ ಉಂಬ ಅವರ ಬೆಂಬಲವೇ ಯಾದವಕುಲೇಶಾ ||8|| ಶಿವಗೆ ತ್ವಂಚ ಬಾಹುಯೆಂದು ಪೇಳಿ ಮೋಹ ದಿವಿಚಾರಿಗಳ ತಮಸಿಗೆ ಹಾಕುವೆ ಶಿವಮೂರುತಿ ನಮ್ಮ ವಿಜಯವಿಠ್ಠಲರೇಯ ಶಿವನಾಳು ಮಾಡಿ ಆಳುವ ದೈವವೇ||9||

Thoughts & Reflections

0

No reflections shared yet. Be the first to share your thoughts!

Share your thought