Bhasaka
← Back to home

ನಮೋ ನಮೋ ಶ್ರೀ ಮಧ್ವರಾಯ ಸುರಮುನಿಗೇಯ

Author: ವಿಜಯದಾಸCategory: ಶ್ರೀಮಧ್ವಾಚಾರ್ಯ
ನಮೋ ನಮೋ ಶ್ರೀ ಮಧ್ವರಾಯ ಸುರಮುನಿಗೇಯ ನಮೋ ನಮೋ ಶ್ರೀ ಮಧ್ವಾಚಾರ್ಯ ಆರ್ಯಾ ಭೃಗು ಕುಲೋತ್ತಮ ರಾಮ ಭೂಸುರರಿಗೆ ಸರ್ವ ಜಗವೆಲ್ಲ ಧಾರಿಯನು ಯೆರದು ಸಂಹ್ಯಾ ನಗದಲ್ಲಿ ನಿಂದು ಸಮುದ್ರನ್ನ ಹಿಂದಕ್ಕೆ ತೆಗಿಸಿ ಈ ಭೂಮಿಯನು ಸಾಧಿಸಿದನು||1|| ಅತಿ ದಯಾಪರ ಮೂರ್ತಿ ಅಲ್ಲಿಗಲ್ಲಿಗೆ ಕ್ಷೇತ್ರ ಗತಿ ತಪ್ಪಿದಂತೆ ನಿರ್ಮಾಣ ಮಾಡಿ ಸತಿಪತಿಯ ಉದ್ಧರಿಸಿ ಬರುತ ಕಂಡನು ಉ ನ್ನತವಾದ ಪರ್ವತವು ಯೋಜನವಿರೆ ||2|| ಬೆರಗಾಗಿ ಪರಶುರಾಮನು ಬಂದು ಈ ಗಿರಿಯಲ್ಲಿ ನಿಂದು ಅಗ್ರಭಾಗವೈದೆ ತರಹರಿಸಲಾರದೇ ಭೂಮಿಗಿಳಿಯಿತು ಅದ್ರಿ ನಿರೀಕ್ಷಿಸಿ ಸುಜನರು ಇದ್ದನಿತು||3|| ಸಿರಿರೂಪ ದುರ್ಗಾನಾಮಕಳಾದ ದೇವಿಯನು ಕರದು ಈ ಸ್ಥಾನದಲಿ ಇರ ಹೇಳಿದಾ ಅರವು ಮಾಡದೆ ಮುಂದೆ ಕಲಿಯುಗದಲಿ ನೆರದು ದುರುಳರಾತಿಯರ ಸಂಹರಿಸುಯೆಂದು ||4|| ಅನಿತರೊಳಾಕಾಶದಲಿ ಜಯ ಜಯವೆಂದು ಅನಿಮಿಷರು ಕೊಂಡಾಡಿ ನಗುತ ದಿವ್ಯ ಮಣಿಮಯ ವಿಮಾನದಿಂದಾ ಗಿರಿಗೆ ವೇಗದಿ ಸು ಮ್ಮನರಾಗಿ ಬಂದು ತುತಿಸಿದರು ಹರಿಯಾ ||5|| ಅಂದಿನಾರಭ್ಯವಾಗಿ ಇದೇ ವಿಮಾನಗಿರಿ ಯೆಂದು ಕರೆಸಿತು ಶ್ರುತಿ ಯುಕ್ತಿಯಲ್ಲಿ ಎಂದೆಂದಿಗೆ ಇದನೆ ನೋಡಿದವರಿಗೆ ದೋಷ ಗಂಧವಾದರು ಇಲ್ಲಾ ಇಲ್ಲ ಇಲ್ಲಾ||6|| ಈ ಮಹಿಮೆಯನು ಕೇಳಿ ಧರ್ಮ ತಪವನು ಮಾಡಿ ಭೂಮಿಯೊಳಗೆ ಎನ್ನ ವಂಶಸ್ಥನು ಸೋಮಾರ್ಕ ಪ್ರಭಯಂತೆ ಕೀರ್ತಿಯನು ಪಸರಿಸಿ ಪಾಮರರ ಉದ್ಧರಿಸಬೇಕು ಯೆಂದು||7|| ಈ ಪರಿ ಶ್ರೀಹರಿಯ ಧ್ಯಾನವನು ಮಾಡಲು ಶ್ರೀಪತಿ ವರವಿತ್ತ ಮುಂದೆ ಮಹ ಪಾಪಿ ಪುಟ್ಟುವನು ಅವನಗೋಸುಗ ವಾಯು ತಾ ಪರಮ ಪ್ರೀತಿಯಲಿ ಜನಿಸುವನು ||8|| ಅಂದ ಮಾತಿಗೆ ಯಮನು ಬಹುಕಾಲದಲಿದ್ದ ಛಂದದಿಂದದಿ ಪೋದ ತನ್ನ ಪುರಕೆ ಇಂದಿರಾಪತಿ ನೇಮಿಸಿದ ಪರಿಯಂತೆ ಆ ನಂದತೀರ್ಥರಾಗಿ ಜನಿಸಿದರು ||9|| ಏನು ಪೇಳಲಿ ಪುಣ್ಯ ಚರಿತಯನು ಚನ್ನಾಗಿ ಇಂತು ಹೇಳಿದ ಪ್ರಕಾರದಲಿ ಹೇಳಿ ಕೇಳೆ e್ಞÁನದಲಿ ಅಧಿಕಾರಾಗಿ ಇಷ್ಟಾನಿಷ್ಟ ಪುಣ್ಯ ಮಾನದಲಿ ಕೊಂಡಾಡಿ ಸುಖಿಪರಲ್ಲಿ||10|| ಹುರಳಿ ಗುಗ್ಗರಿ ಮೆದ್ದ ಅದ್ಧುತವ ಕೇಳಿದರೆ ಉರಳಿ ಹೋಗುವದು ಜನ್ಮಾಂತರದ ದುಷ್ಕರ್ಮ ಮರಳಿ ಬಲಿ ಬಾಲವನು ಪಿಡಿದದು ನೆನಸಿದರೆ ನೆರಳಾಗುವರು ಸುರರು ಮುಕ್ತಿಯಿನಿತ್ತು ||11|| ಧರಣಿಧರದಿಂದ ಧುಮುಕಿದ ಪಾದಯುಗ ನೋಡೆ ಎರಡೊಂದು ಏಳು ಕುಲತೃಪ್ತರಹರೊ ಅರೆ ಮ್ಯಾಲೆ ಸಾಲವನು ತಿದ್ದಿದಾ ವಾರ್ತಿ ಕೇಳಿ ಎರಡೊಂದು ಋಣದಿಂದ ಕಡೆಗಾಗುವ ||12|| ತಲೆಕೆಳಕಾಗಿ ಬೆಳೆದಾ ವೃಕ್ಷವನು ನೋಡಿ ಬಲಿವನು ಸುರದ್ರುಮದಂತೆ ರಂಗ ಛಲದಿಂದ ಸರ್ಪನ ವರಸಿದ ಸ್ಥಳ ಕಾಣೆ ಬಲು ವಿಷಗಳು ಪೋಗಿ ನಿರ್ಮಲಹರೋ ||13|| ಧೂಳಿ ಅಕ್ಷರ ಬರೆದ ಪ್ರದೇಶ ನೋಡಲು ವಾಲಯಾ ಶುಭವಿದ್ಯ ಫಲಿಸುವದು ಲೀಲೆಯಿಂದ ಗ್ರಂಥ ಅಭ್ಯಾಸಕೆ ಪೋಗಿ ಬರುವ ಶೀಲತೆಯು ಕೇಳೆ ಮನೋ ವಾಯುವೇಗ ||14|| ಬುತ್ತಿಯ ಉಂಡ ಸ್ಥಳವನ್ನು ಕೊಂಡಾಡಲು ತೃಪ್ತನಾಗುವ ಮನುಜ ಮೃಷ್ಟಾನ್ನದಿ ನಿತ್ಯ ಬಾಲಕ್ರೀಡೆ ಆಡಿದ್ದು ಪಾಡಲು ಪುತ್ರೋತ್ಸವಗಳಿಂದ ಬಾಳುತಿಪ್ಪ||15|| ಶರ ಚಾಪ ಗದ ಪದುಮ ಎರಡೊಂದು ತೀರ್ಥಗಳು ಇರುತಿಪ್ಪ ವಾಸುದೇವನೆಂಬೊ ನಾಮಾ ಸರೋವರದಲಿ ಮಿಂದು ಸ್ತೋತ್ರ ಮಾಡಿದ ನರಗೆ ವಿರಜೆಯಲಿ ಸ್ನಾನ ಸಂದೇಹವಿಲ್ಲ ||16|| ಜನಿಸಿ ಮೊದಲು ಮಹಾ ಬದರಿಗೆ ಪೋದಾರಭ್ಯ ಎಣಿಕೆ ಇಲ್ಲದೆ ಚರಿತೆ ಅನುದಿನದಲಿ ಗುಣಿಸಿ ಗುಣದಲಿ ತಿಳಿದು ಕೀರ್ತನೆಯನೆಸಗಿದಾ ಮನುಜರಿಗೆ ಸತ್ಕೀರ್ತಿ ಬರುವುದಯ್ಯಾ ||17|| ಮಧ್ವ ಮಧ್ವ ಎಂಬೋ ನಾಮವನು ನುಡಿದರೆ ಬದ್ಧವಾಗಿದ್ದ ಭವಾಬ್ಧಿಯಿಂದ ಎದ್ದು ಕಡಿಗೆ ಬಿದ್ದು ಸಂಚಿತಾಗಾಮಿಯಿಂದ ಗೆದ್ದು ಚರ್ಮ ದೇಹದಿಂದ ನಲಿವ ||18|| ಶ್ರೀ ಪೂರ್ಣಬೋಧ ಗುರುಶೇಖರ ಸುಗುಣಧಾಮ ಆಪನ್ನ ಪರಿಪಾಲ ಅಮೃತಫಲದ ವ್ಯಾಪುತ ನಾನಾ ಸ್ಥಾನ ಹನುಮ ಭೀಮ ಸರ್ವ ರೂಪಾತ್ಮಕ ಪ್ರಾಣ ಭಾರತೀಶ||19|| ಕೇಳಿ ಹರುಷಿತನಾಗಿ ಬಂದ ವೈಭವದಂತೆ ಕಾಲ ಹಿಂಗಳಿಯದೇ ನಿತ್ಯದಲ್ಲಿ ಲೀಲೆಯಲಿ ವಾಸವಾಗಿರಲೆಂದು ಅಂದು ಪೇಳಲಾ ಮೌಳಿಯನು ತೂಗಿ ಸರ್ವರು ನಿಂತರು||20|| ಪುಂಜಕಾಸ್ಥಳ ಬಂದು ತಪವು ಮಾಡಲು ಕ್ಷೇತ್ರ ರಂಜನವಾಯಿತು ಇದೇ ನಾಮದಲ್ಲಿ ಕುಂಜರ ವರದ ನಮ್ಮ ವಿಜಯವಿಠ್ಠಲನಂಘ್ರಿ ಕಂಜವನು ಭಜಿತ ಗುರುರಾಜ ಜಯತು ||21||

Thoughts & Reflections

0

No reflections shared yet. Be the first to share your thoughts!

Share your thought