Bhasaka
← Back to home

ನರಸಿಂಹ ವಜ್ರಸಿಂಹ

Author: ವಿಜಯದಾಸCategory: ಶ್ರೀನರಸಿಂಹ
ನರಸಿಂಹ ವಜ್ರಸಿಂಹ ಸರಸಿಜನಾಭಾ ದಕ್ಷಿಣ ಶರಧಿನಿವಾಸಾ ಹಿರಣ್ಯಕಶ್ಯಪು ತಾ ಪ್ರಹ್ಲಾದನಾ ಬಾಧಿಸಲು ಪರಿಯ ದೈವವೆ ಮೊರೆಯೋಗಲೂ ಹಿರಿದಾಗಿ ಕೇಳಿ ಹಿತದಲಿ ಬಂದು ಬೊಬ್ಬಿಡಲು ಹಿರಣ್ಯಗರ್ಭಾದಿಗಳು ಹಿರಿದು ಚಿಂತಿಸಲೂ ||1|| ಭುಗಿಲೆನೆ ಧಿಗಿಲೆನೆ ದಿಕ್ಕಿನೆಲಿ ಪ್ರತಿ ಶಬ್ದ ಪುಟ್ಟಿತಿರೆ ಪಗಲಿರಳು ಒಂದೆಂದರು ಸಕಲರೂ ಝಗಝಗಿಪ ಬೆಳಗು ಕವಿದದು ಮೂರು ಲೋಕಕ್ಕೆ ಉಗುರು ಕೊನೆ ಪೊಗಳಿ ವೇದಗಳು ಬೆರಗಾಗಿ ||2|| ರಕ್ಕಸ ನೋಡಲು ಬಗೆದು ಕರುಳು ಕೊರಳಿಗೆ ಮಾಲೆ ಇಕ್ಕಿ ಭಕ್ತಗೆ ಮೆಚ್ಚಿ ವರವನಿತ್ತಾ ಕಕ್ಕಸದ ದೈವ ಅನಂತ ಪದುಮನಾಭ ಮುಕ್ತಿದಾಯಕ ವಿಜಯವಿಠ್ಠಲ ಮಹದಾ||3||

Thoughts & Reflections

0

No reflections shared yet. Be the first to share your thoughts!

Share your thought