Bhasaka
← Back to home

ನವನೀತ ತಸ್ಕರಾಯ ಜಯಮಂಗಳಂ

Author: ವಿಜಯದಾಸCategory: ಶ್ರೀಕೃಷ್ಣ
ನವನೀತ ತಸ್ಕರಾಯ ಜಯಮಂಗಳಂ ಪವಮಾನ ವಂದಿತಾಯ ಶುಭಮಂಗಳಂ ಪರಿಪೂರ್ಣಾಯ ವಿಶ್ವ ಪರಬ್ರಹ್ಮ ಅಚ್ಯುತಾಯ ಶರನಿಧಿ ಮಂದಿರಾಯ ಜಯಮಂಗಳಂ ಪರವಸ್ತ ಪರಪರಂಜ್ಯೋತಿ ಪ್ರಕಾಶಾಯ ಸಿರಿದೇವಿ ಅರಸಾಯ ಶುಭಮಂಗಳಂ ||1|| ಈಶಾ ಇಂದ್ರಾ ವಂದಿತಾಯ ವಿಶ್ವನಯನಾಯ ವಾರಾ ಣಾಸಿ ಕ್ಷೇಮ ಸ್ಥಾಪಿತತಾಯ ಜಯಮಂಗಳಂ ಆಶಾ ದೋಷಾ ಕ್ಲೇಷಾ ಪಾಶಾ ನಾಶಾ ನಾರಾ ಪೋಷಕಾಯ ಶೇಷರಾಜ ಶಯನಾಯ ಶುಭಮಂಗಳಂ ||2|| ವಾಣೀಪತಿ ಜನಕಾಯ ವೇಣು ನಾದಾ ವಿನೋದಾಯ ಮಾಣಿಕ್ಯ ಹೀರಾ ಹಾರಾಯ ಜಯಮಂಗಳಂ ಬಾಣ ಬಾಹು ಖಂಡನಾಯ ಬಲಿ ಸದನವಾಸಾಯ ಚಾಣೂರ ಮರ್ಧನಾಯ ಶುಭಮಂಗಳಂ ||3|| ವಿಷ್ಣು ಕರ್ಮಾಣಿ ಪಶ್ಯಾಮಿ ವಿಶ್ವ ಕುಟುಂಬಿ ಪಾಲಾಯ ವಿಷ್ಣು ಸರ್ವೋತ್ತಮಾಯ ಜಯ ಮಂಗಳಂ ಶಿಷ್ಯ ಜನ ವರದಾಯ ಸಿದ್ಧ ಪ್ರಸಿದ್ಧ ರೂಪಾಯ ಮುಷ್ಟಿಕಾ ಸುರವಧಾಯ ಶುಭಮಂಗಳಂ ||4|| ಬಂಧು ಬಂಧನಾಯಾ ಮಹಸಿಂಧು ನರ ರಕ್ಷಕಾಯ ಸಿಂಧುರಾಜಾ ಹರಣಾಯ ಜಯಮಂಗಳಂ ವೃಂದಾವನ ಸಂಚಾರಾಯ ವಿಜಯವಿಠ್ಠಲರೇಯಾಯ ಬಿಂದು ಮಾಧವ ದೇವಾಯ ಶುಭಮಂಗಳಂ||5||

Thoughts & Reflections

0

No reflections shared yet. Be the first to share your thoughts!

Share your thought