Bhasaka
← Back to home

ನಾಡ ದೈವಗಳ ಪೂಜೆಯನು

Author: ವಿಜಯದಾಸCategory: ಶ್ರೀಕೃಷ್ಣ
ನಾಡ ದೈವಗಳ ಪೂಜೆಯನು ಮಾಡಿದರೆ | ಕೇಡಲ್ಲದೆ ಮತ್ತೆ ಕೈವಲ್ಯವುಂಟೇ ಕೊಳಚಿ ನೀರನು ದಾಟಲರಿಯದ ಮನುಜಗೆ ನಿಲವುದ್ದ ದ್ರವ್ಯ ಕೊಡುವೆ ಎನ್ನ ನಾ- | ಜಲನಿಧಿಯ ಉತ್ತರಿಸಿಕೊಂಡು ಎಂದರೆ ಅವನು | ಅಳಿಯದಂತೆ ದಡಕೆ ತರಬಲ್ಲನೇ ||1|| ಕತ್ತಲೆಗಂಜುವನ ಕರೆತಂದು ಶೃಂಗರಿಸಿ | ಉತ್ತಮದ ವಾಜಿವಾಹನವ ಮಾಡಿ || ಕತ್ತಿಯನು ಕರದಲ್ಲಿ ಕೊಟ್ಟು ರಿಪುಪರಿವಾರ- | ದತ್ತ ಒಂದಡಿಯಿಟ್ಟು ಬರಬಲ್ಲ್ಲನೇ ||2|| ತನಗೆ ಬಂದಾವಸ್ತು ಪರಿಹರಿಸಿಕೊಳ್ಳದೆ ಪರ- | ಮನ ವಿಡಿದು ಭಜಿಸಿದರೆ ಏನಾಗದೊ || ಬಿನಗು ದೈವರಗಂಡ ಶ್ರೀ ವಿಜಯವಿಠ್ಠಲನ | ವನಜಪದ ನೆನೆದರೆ ಮುಕುತಿಯುಂಟು ||3||

Thoughts & Reflections

0

No reflections shared yet. Be the first to share your thoughts!

Share your thought