Bhasaka
← Back to home

ನಾನು ನಿನ್ನ ಸೇವಕ ಏನಾದರೂ ಬರಲಿ

Author: ವಿಜಯದಾಸCategory: ಶ್ರೀಕೃಷ್ಣ
ನಾನು ನಿನ್ನ ಸೇವಕ ಏನಾದರೂ ಬರಲಿ ನಿನ್ನ ಬಿಡುವನೆ ರಂಗಾ ಅಪತ್ತೆ ಬರಲಿ ಅತಿಶಯದ ಕ್ಲೇಶವೇ ಬರಲಿ ಕೋಪ ಕಾಮಾದಿಗಳು ವೆಗ್ಗಳಿಸಲಿ ಪಾಪದ ರಾಶಿಗಳು ಬಂದು ಬೆನ್ನಟ್ಟಲಿ ಶ್ರೀಪತಿ ನಿನ ಪಾದವನು ಬಿಡಬಲ್ಲನೆ ||1|| ಯಮನಪುರದ ಬಟ್ಟೆ ಅತಿ ಕಠಿಣವಾಗಲಿ ಯಮನಾಳು ಬಲು ಭಯಂಕರರಾಗಲಿ ಯಮನು ದಂಡಿಸಿ ತೀವ್ರ ನಿರಯದೊಳಗೆ ಇಡಲಿ ಕಮಲನಾಭನೆ ನಿನ್ನ ಪಾದವನು ಬಿಡಬಲ್ಲನೆ||2|| ಲೋಕದೊಳಗಿದ್ದ ಜನರಿಗೆ ಬಪ್ಪ ದೋಷಗಳು ಏಕವಾಗಿ ಎನಗೆ ಬರಲಿ ಇಂದೆ ನಾ ಕಳವಳಿಸಿದರು ನಿನ್ನಂಘ್ರಿಯಗಳಾಣೆ ಶ್ರೀಕಾಂತ ವಿಜಯವಿಠ್ಠಲರಂಗ ಕೇಳೊ||3||

Thoughts & Reflections

0

No reflections shared yet. Be the first to share your thoughts!

Share your thought