Bhasaka
← Back to home

ನಾ ನಿನ್ನ ಧ್ಯಾನದೊಳಿರಲು

Author: ಪುರಂದರದಾಸCategory: ಶ್ರೀಕೃಷ್ಣRaaga: ದುರ್ಗಾTaala: ತೇವರಾ
ನಾ ನಿನ್ನ ಧ್ಯಾನದೊಳಿರಲು | ಮಿಕ್ಕ ಹೀನ ಮಾನವರೇನು ಮಾಡಬಲ್ಲರೋ ರಂಗ || ಮತ್ಸರಿಸುವರೆಲ್ಲ ಕೂಡಿ ಮಾಡುವುದೇನು ಅಚ್ಯುತ ನಿನದೊಂದು ದಯೆಯಿರಲು | ವಾತ್ಸಲ್ಯ ಬಿಡದಿರು ನಿನ್ನ ನಂಬಿದೆ ದೇವ ಕಿಚ್ಚಿಗೆ ಇರುವೆ ಮುತ್ತುವುದೆ ಪೇಳೆಲೊ ರಂಗ || ಕನ್ನಡಿಯೊಳಗಿನ ಗಂಟು ಕಂಡು ಕಳ್ಳ ಕನ್ನವಿಕ್ಕಲವನ ವಶವಹುದೆ | ನಿನ್ನ ನಂಬಲು ಮುದ್ದು ಪುರಂದರವಿಟ್ಠಲ ಚಿನ್ನಕ್ಕೆ ಪುಟವನಿಟ್ಟಂತೆ ಅಹುದು ರಂಗ ||

Thoughts & Reflections

0

No reflections shared yet. Be the first to share your thoughts!

Share your thought