Bhasaka
← Back to home

ನಾರಿ ಗೌರಿ ಕೌಮಾರಿ

Author: ವಿಜಯದಾಸCategory: ಶ್ರೀದೇವಿ
ನಾರಿ ಗೌರಿ ಕೌಮಾರಿ ವಾರಿಜಾಕ್ಷನ ಚರಣ ವಾರಿಯನು ಧರಿಸುವ ನಾರಿ ಗೌರಿ ಕೌಮಾರಿಪ ಬಾಣ ಕುಂಭನೆಂಬೊ ದಾನವರೀರ್ವರು ಕ್ಷೋಣಿಯೊಳು ಬಂದಲ್ಲಿ ತಪವ ಮಾಡಿ ಮಾಣದಲೆ ಕಮಲ ಗರ್ಭನವೊಲಿಸಿ ವೇಗದಲಿ ಏನು ವರ ಬೇಡೆನಲು ನಗುತಲವನು ಸುರಿದನು ||1|| ಜಗಕ್ಕೊಡಿಯನಾವಾತ ಆತನ ತನು ಸಂಬಂಧಿಗಳೆಮ್ಮ ಕೊಲ್ಲಲ್ಲಿ ಉಳಿದವರ ಬಗಿಯದಂತೆ ವರವನು ಪಾಲಿಸೆನಲು ನಗುತ ಲೋಕೇಶ ದುರುಳರಿಗೆ ಸಲೆ ಇತ್ತಾ ||2|| ಚತುರ್ದಶ ಲೋಕವನು ಗೆದ್ದು ತ್ರಿದಶರಾ ಮಿತಿಯಿಲ್ಲದೆ ಮಾನಭಂಗ ಮಾಡಿ ಪತಿತರು ಈ ತೆರದಲಿರುತಿರಲು ವಿಬುಧರು ಚತುರ ಮುಖಗೆ ಮೊರೆಯಿಡಲು ಹರಿಗೆ ಬಿನ್ನೈಸಿ||3|| ತಿಳಿದು ಕುಂಡಲನೊಲಿದು ದ್ವಾಪಾರಾಂತ್ಯದಲಿ ಖಳ ಕಂಸನೆಂಬುವನು ಪುಟ್ಟಿ ತನ್ನ ಬಲದಲಿ ತನ್ನ ಅನುಜೆಯರ ಶರೆಯುಯಿಟ್ಟು ಬಳಲಿಸುವವಳಿಗೊಲಿದು ಅವತಾರ ಮಾಳ್ಪ ಯುದಕುಲದಲಿ||4|| ಎನ್ನ ಕೂಡಲೀ ದುರ್ಗಿ ಜನಿಸಿ ಬರಲು ಅವ ಳನ್ನ ಕೊಲ್ಲುವೆನೆಂದು ಕಂಸ ಮುನಿಯೆ ತನ್ನ ಶಕ್ತಿಯಿಂದಾ ಗಗನಕ್ಕೆ ಪಾರಿ ಬರಲು ಘನ್ನ ಘಾತುಕರನ್ನ ಮಡುಹಿ ಬಿಡುವಳೆನಲು ||5|| ಇಂತು ಪೇಳಲಿ ಅಜನು ಸಂತೋಷದಿರಲಿತ್ತ ದಂತಿ ಗಮನಳು ಉದುಭವಿಸಿ ಬಂದು ಪಿಂತೆ ಮಾಡಿದ ತಪಸು ಸಿದ್ಧಿಸಿತು ಎನಗೆನುತ ಅಂತಕರಾಗಿದ್ದ ಖೂಳರ ಸದೆ ಬಡಿದು ||6|| ಹರಿಕೃಪೆಯಿಂದ ದಕ್ಷಿಣ ಶರಧಿಯಲಿ ನಿಲ್ಲಲು ಪರಮ ಮುನಿ ಅಗಸ್ತ್ಯ ಪೂಜಿಸಿದನು ಶರರಾಜ ಬಂದು ಮದುವೆನೈದಲು ಪರಮೇಷ್ಠಿ ಹರನ ಸಹಿತಲಿ ನಡೆತಂದಾ ||7|| ಬರಲಾಕ್ಷಣದಲ್ಲಿ ಕಲಿಯುಗ ಪ್ರಾಪುತವಾಗೆ ಮರಳೆನಿಂದರು ವರ ಸುಧೇಂದ್ರವೆಂಬೊ ಪುರದಲ್ಲಿ ಪೂಜೆಗೊಳ್ಳುತಲ್ಲಿರಲು ಇತ್ತ ಸುಂ ದರ ಕನ್ಯಾಮಣಿಯಾಗಿ ದಶದಿಶಿಗೆ ಪೊಳೆಯುತಿರೆ||8|| ಅಂದಾರಭ್ಯನಾಗಿ ಕನ್ಯಾಕುಮಾರಿ ಎನಿಸಿ ಬಂದು ನವತೀರ್ಥದಲಿ ಯಾತ್ರೆ ಜನರು ಮಿಂದಾಗಲೆ ಮನದಂತೆ ಭಕುತಿಯನಿತ್ತು ಪೊಂದಿಸುವೆ ವಿಜಯವಿಠ್ಠಲನ ಪಾದದಲ್ಲಿ||9||

Thoughts & Reflections

0

No reflections shared yet. Be the first to share your thoughts!

Share your thought