Bhasaka
← Back to home

ನಿನ್ನ ಒಲುಮೆಯಿಂದ ನಿಖಿಳ

Author: ವಿಜಯದಾಸCategory: ಶ್ರೀಕೃಷ್ಣ
ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೊ ಮಹರಾಯ ಎನ್ನ ಪುಣ್ಯಗಳಿಂದ ಈ ಪರಿಯುಂಟೇನೊ ನಿನ್ನದೆ ಸಕಲ ಸಂಪತ್ತು ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವುದಕಿನ್ನು ತಬ್ಬಿಬ್ಬುಗೊಂಡನೊ ಹಿಂದೆ ನಿಬ್ಬರದಿಂದಲಿ ಸರ್ವರ ಕೂಡುಂಬೊ ಹಬ್ಬವನುಣಿಸುವಿ ಹರಿಯೆ ||1|| ಸಂಜೆತನಕವಿದ್ದು ಸಣ್ಣ ಸೌಟಿನ ತುಂಬ ಗಂಜಿ ಕಾಣದೆ ಬಳಲಿದೆನೋ ವ್ಯಂಜನ ಮೊದಲಾದ ನಾನಾ ರಸಂಗಳು ಭುಂಜಿಸುವುದು ಮತ್ತೇನೊ||2|| ಜೀರ್ಣ ಮಲಿನ ವಸ್ತ್ರ ಕಾಣದ ನರನಿಗೆ ಊರ್ಣ ವಿಚಿತ್ರ ಸುವಸನ ವರ್ಣವರ್ಣದಿಂದ ಬಾಹೋದದೇನೊ ಸಂ ಪೂರ್ಣಗುಣಾರ್ಣವ ದೇವ ||3|| ನೀಚೋಚ್ಚ ತಿಳಿಯದೆ ಸರ್ವರ ಚರಣಕ್ಕೆ ಚಾಚಿದೆ ನೊಸಲ ಹಸ್ತಗಳ ಯೋಚಿಸಿ ನೋಡಲು ಸೋಜಿಗವಾಗಿದೆ ವಾಚಕ್ಕೆ ನಿಲುಕದು ಹರಿಯೆ ||4|| ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ ಮೆದ್ದೆನೆಂದರೆ ಈಯಗಾಣೆ ಈ ಧರೆಯೊಳಗೆ ಸತ್ಪಾತ್ರ ಕೂಡುಂಬೊ ಪದ್ಧತಿ ನೋಡೊ ಪುಣ್ಯಾತ್ಮ ||5|| ಮನೆ ಮನೆ ತಿರಿದರು ಕಾಸು ಪುಟ್ಟದೆ ಸು ಮ್ಮನೆ ಚಾಲ್ವರಿದು ಬಳಲಿದೆನೊ ಹಣ ಹೊನ್ನು ದ್ರವ್ಯಂಗಳಿದ್ದಲ್ಲಿಗೆ ತನಗೆ ತಾನೆ ಪ್ರಾಪ್ತಿ ನೋಡೊ ಜೀಯಾ ||6|| ವೈದಿಕ ಪದವಿಯನೀವಗೆ ಲೌಕಿಕ ಐದಿಸುವುದು ಬಹು ಖ್ಯಾತೆ ಮೈದುನಗೊಲಿದ ಶ್ರೀ ವಿಜಯವಿಠ್ಠಲನ ನಿನ್ನ ಪಾದಸಾಕ್ಷಿಯನುಭವವೊ ||7||

Thoughts & Reflections

0

No reflections shared yet. Be the first to share your thoughts!

Share your thought