Bhasaka
← Back to home

ನಾನಿನ್ನೊಳನ್ಯ ಬೇಡುವುದಿಲ್ಲ

Author: ಪುರಂದರದಾಸCategory: ಶ್ರೀಕೃಷ್ಣRaaga: ಶಂಕರಾಭರಣTaala: ಆದಿ
ನಾನಿನ್ನೊಳನ್ಯ ಬೇಡುವುದಿಲ್ಲ| ಹೃದಯಕಮಲದೊಳು ನಿಂದಿರು ಹರಿಯೆ || ಶಿರ ನಿನ್ನ ಚರಣಕೆ ಎರಗಲಿ | ಎನ್ನ ಚಕ್ಷು ಸದಾ ನಿನ್ನ ನೋಡಲಿ ಹರಿಯೆ | ಕರ್ಣ ಗೀತಂಗಳ ಕೇಳಲಿ | ನಿನ್ನ ನಿರ್ಮಾಲ್ಯವ ನಾಸಘ್ರಾಣಿಸಲಿ || ನಾಲಿಗೆ ನಿನ್ನನು ಕೊಂಡಾಡಲಿ | ಕರಗಳೆರಡು ನಿನ್ನನರ್ಚಿಸಲಿ | ಚರಣ ತೀರ್ಥಯಾತ್ರೆ ಮಾಡಲಿ | ಎನ್ನ ಮನ ಅನುದಿನ ನಿನ್ನ ಸ್ಮರಿಸಲಿ ಹರಿಯೆ || ಬುದ್ದಿಯು ನಿನ್ನೊಳು ಬೆರೆಯಲಿ ಹರಿಯೆ | ಚಿತ್ತ ನಿನ್ನೊಳು ಸ್ಥಿರವಾಗಲಿ | ಭಕ್ತಜನರಸಂಗವಾಗಲಿ | ಪುರಂದರ- ವಿಟ್ಠಲನೆ ಇಷ್ಟೇ ದಯಮಾಡೊ ||

Thoughts & Reflections

0

No reflections shared yet. Be the first to share your thoughts!

Share your thought