Bhasaka
← Back to home

ನಿನ್ನ ಮನಸಿಗೆ ಬಂತೆ

Author: ವಿಜಯದಾಸCategory: ಶ್ರೀಕೃಷ್ಣ
ನಿನ್ನ ಮನಸಿಗೆ ಬಂತೆ ಪ್ರಾಣನಾಥಾ ಚಿಣ್ಣನೆಂದು ನೋಡದಲೆ ಕರಿಯಲಟ್ಟಿದೆ ವೇಗ ಸಾಕಿದೆನು ನಿನ್ನ ದಾಸನೆಂದು ತಿಳಿದು ವಿ- | ವೇಕದಿಂದಲಿ ಉಪನಯನ ಮಾಡೀ | ಲೋಕದೊಳಗೆ ಬೆಳಸಿ ಮುದುವೆಯ ಮಾಡಿ ಅ- ನೇಕ ತೀರ್ಥಯಾತ್ರೆ ತಿರುಗಿದವನಾ ಇಂದೆ 1 ಉದ್ಧಾರವಾಗುವೆನು ಕುಲಕೋಟಿ ಸಹಿತೆಂದು ಪದ್ದಿಟ್ಟುಕೊಂಡಿವೈ ಈ ತರಳನ ಸುದ್ದಿ ತಿಳಿಯಗೊಡದೆ ವಿಯೋಗ ಮಾಡಿಸಿದೆ ಸಿದ್ಧ ಮಾಡಿದೆ ನಿನ್ನ ಸಂಕಲ್ಪವೆ ಇಂದು ||2|| ನೆಚ್ಚಿ ನಿನ್ನ ಪಾದ ಭಜಿಸುವರಿಗೆ ಭಾಗ್ಯ ಹೆಚ್ಚುಗೊಡದಿಪ್ಪನೆಂದು ಬಿರುದು ಧರಿಸಿ ನಿಚ್ಚ ಮೆರೆವಾ ಮಹಿಮ ವಿಜಯವಿಠ್ಠಲರೇಯ ಅಚ್ಚ ಭಕುತರ ಪ್ರಿಯ ವೈಕುಂಠಕೆ ಇಂದೆ ||3||

Thoughts & Reflections

0

No reflections shared yet. Be the first to share your thoughts!

Share your thought