Bhasaka
← Back to home

ನಿನ್ನ ಮರೆದೆನೊ ರಂಗ

Author: ವಿಜಯದಾಸCategory: ಶ್ರೀಕೃಷ್ಣ
ನಿನ್ನ ಮರೆದೆನೊ ರಂಗ ನಿನ್ನ ಮರೆದೆ ಅನ್ಯರನ್ನಕೆ ಸಿಲುಕಿ ಅನುಗಾಲ ಮರುಳಾಗಿ ಊಟಕ್ಕೆ ಬರುವಲ್ಲಿ ತನುವುಬ್ಬಿ ಎನ್ನ ಮನ ನಾಟುವುದು ಅವರ ಕಡೆ ಅನುರಾಗದಿ ನೀಟಾದ ಭೋಜನವ ಬಯಸುವೆನು ಯಮರಾಯ ಪಾಟು ಬಡಿಸುವ ಭಂಗ ಕೇಳಿ ಎಚ್ಚರಿಯದಲೆ||1|| ಮತ್ತೆ ಕರೆಯಲು ಬರಲು ಉತ್ಸವ ಪಿಡಿಯಲೊಶವೆ ಹೊತ್ತು ಹೊತ್ತಿಗೆ ಅವರ ಕೊಂಡಾಡುತ ಹೆತ್ತವರಿಗಿಂತಲೂ ಅಧಿಕ ನಮಸ್ಕರಿಸುವೆನು ಚಿತ್ತಜನಪಿತ ನಿನ್ನ ಸ್ತೋತ್ರ ಪಠಿಸದಲೆ||2|| ಎಡೆಯ ಮುಂದೆ ಕುಳಿತು ಎಲ್ಲ ಕಾಲಗಳಿಂದ ಬಿಡದೆ ಮಾಡಿದ ಪುಣ್ಯಪಾಪಗಳೆದು ಎಡಬಲದವರ ಪಙÉ್ತ ನೋಡಿಕೊಳ್ಳುತ ದುಃಖ ಪಡುವೆನೋ ಎನಗಿಷ್ಟು ಕಡಿಮೆ ಹಾಕಿದರೆಂದು||3|| ಅನ್ನವಿತ್ತವನ ಪಾಪಗಳು ನಿರಂತರದಿ ಅನ್ನದಾಶ್ರಯ ಮಾಡಿಕೊಂಡಿಪ್ಪವು ಚೆನ್ನಾಗಿ ತಿಳಿಯದಲೆ ಚಾತುರ್ಯದಿಂದಲಿ ಧನ್ಯನಾದೆನು ನಾನು ಪರರ ಪಾಪವ ಭುಜಿಸಿ ||4|| ಒಬ್ಬರೆಡೆ ನೋಡಿಕೊಳಲಧಿಕವಾಗಿದ್ದರೆ ಉಬ್ಬುವೆನು ಊರು ಕೇರಿ ಹಿಡಿಸದಂತೆ ಸುಬ್ಬನ ಸೂರೆಯಂತೆ ಪರರ ಅನ್ನವನುಂಡು ಮೊಬ್ಬಿನಲಿ ದಿನಗಳೆದೆ ದೀನ ಮನಸಿನಲಿ ||5|| ಒಡಲಿಗೆ ಬಿದ್ದರಸ ಮೂರು ಭಾಗಗಳಾಗಿ ಕಡೆಗೆ ಪೋಗುವುದೊಂದು ನಿಲುವುದೊಂದು ತಡೆಯದಲೆ ಸಂತಾನ ಪಡೆವುದೊಂದೀತೆರ ಕಡೆಗಾಣಲಿಲ್ಲ ಪರರಲಿ ಉಂಡ ಋಣಕೆ||6|| ಆವಾವ ಬಗೆರುಚಿ ಜಿಹ್ವಗೆ ತೋರುತಿದೆ ಆವಾವ ಬಗೆ ನರಕ ಬೇರೆಯುಂಟು ದೇವ ಮಣಿ ಸರ್ವೇಶ ವಿಜಯವಿಠ್ಠಲ ಸ್ವಾಮಿ ಈ ಜೀವ ಹಿತವಾಗುವಂತೆ ಮಾರ್ಗವ ತೋರು ||7||

Thoughts & Reflections

0

No reflections shared yet. Be the first to share your thoughts!

Share your thought