Bhasaka
← Back to home

ನಿನ್ನ ಮಹಿಮೆ ಇದೇನೊ

Author: ವಿಜಯದಾಸCategory: ಶ್ರೀಕೃಷ್ಣ
ನಿನ್ನ ಮಹಿಮೆ ಇದೇನೊ ಕನ್ನಗಾರರ ಗುರುವೆ ಅಳಗಿರಿ ತಿಮ್ಮರಾಯಾ ಕ್ಷೋಣಿಯೊಳಗುಳ್ಳವರು ಕ್ಷಿಪ್ರದಲ್ಲಿ ನಿನ್ನ ಕಾಣಿವೇನೆಂಬ ತವಕದಲಿ ಬರಲು ಮಾಣದಲೆ ಅವರ ವಸನ ಸುಲಿಸಿ ತಡೆಯದೆ ಮಾನವನು ಕೊಂಬ ಅಭಿಮಾನಗೇಡಿ ||1|| ಬ್ರಹ್ಮಾದಿಗಳು ಇಲ್ಲಿ ಸುಲಿಸಿಕೊಳಬೇಕೆಂದು ಹೆಮ್ಮೆಯಿಂದಲಿ ನೋಡಿ ಹಿಗ್ಗುವರೋ ಹಮ್ಮಿನದೇವ ನಿನ್ನ ಸೋಜಿಗವೆ ತಿಳಿಯದು ಈ ಮ್ಮಹಿಯೊಳಗೆ ಇಂಥ ಸುಮ್ಮಾನವೇನೊ||2|| ಹಲವು ಕೇಳಿದರೇನು ನೀಚೋಚ್ಚ ಎಣಿಸಲೆ ಒಲಿಸಿದವರಿಗೆ ನೀನು ಒಲಿದು ಎಲ್ಲಾ ಸುಲಿಗೆಯನು ಯಿತ್ತು ಸಂತತಲವರ ಪಾಲಿಪ ಬಲು ದೈವ ವಿಜಯವಿಠ್ಠಲ ಅಳಗಿರಿ ತಿಮ್ಮಾ||3||

Thoughts & Reflections

0

No reflections shared yet. Be the first to share your thoughts!

Share your thought