Bhasaka
← Back to home

ನಿನ್ನ ಮಾತಿಗೆ ಮೆಚ್ಚುವನಾವಾವಾ

Author: ವಿಜಯದಾಸCategory: ಶ್ರೀಕೃಷ್ಣ
ನಿನ್ನ ಮಾತಿಗೆ ಮೆಚ್ಚುವನಾವಾವಾ ಪನ್ನಗಾದ್ರಿ ನಿವಾಸಾ ಪರಾಕು ಎಲೊ ಎಚ್ಚರಿಕೆ ಅಂತರ ಬಾಹೀರ ವ್ಯಾಪ್ತಾ ಆಪ್ತನೆಂಬುವ ಎಂತಾಗುವದೆಂದು ನುಡಿಯದಿರಿ ಕಂತುವಿನ ಪಿತ ನಿನಗೆ ನಮೊ ನಮೊ ಬಿನ್ನೈಪೆ ಸಂತು ಧ್ರುವರಾಯನು ಸಂತತ ಇದಕೆ ಸಾಕ್ಷಿ ||1|| ಒಂದೆ ರೂಪದಲಿ ಪೂಜೆಯಗೊಂಬೆ ಎನಗೆ ಮ ತ್ತೊಂದು ರೂಪಕೆ ಶಕ್ತಿ ಇಲ್ಲೆನ್ನದಿರು ಸಂದೇಹ ಎನಗಿಲ್ಲ ಎಲ್ಲಿದ್ದರು ದೇವ ನಂದನಂದನ ಇದಕೆ ರಾಯ ಬ್ರಾಹ್ಮಣ ಸಾಕ್ಷಿ ||2|| ಬದಿಯಲಿದ್ದರೆ ಇಷ್ಟೆ ಮುಂದೆ ಬರುವ ಆಪತ್ತು ಒದಗಿ ಕಳೆವೋಪಾಯ ಕಡಿಮೆನ್ನದಿರೊ ಮುದದಿಂದ ನಿನ್ನಂಘ್ರಿಗೆರಗುವೆನು ಗತಿಪ್ರದಾ ಕದನದೊಳು ಬದುಕಿ ನರಧ್ವಜನೆ ಸಾಕ್ಷಿ||3|| ಆಪತ್ತು ಕಳೆವೆ ಬೇಡಿದ ಭೋಜನ ಕೊಡುವೆ ಈ ಪರಾಕ್ರಮ ನಿನಗಲ್ಲೆನ್ನದಿರು ಶ್ರೀಪತಿ ನಿನ್ನ ಲೀಲೆಗೆ ಬೆರಗಾಗುವೆನೊ ತಾಪಸರ ಮಧ್ಯದಲಿ ದುರ್ವಾಸಮುನಿ ಸಾಕ್ಷಿ ||4|| ನಾನಾ ಭಕ್ತರು ಇನಿತು ಸಾಕ್ಷಿಯಾಗಿರಲಿಕ್ಕೆ ಏನು ಸೋಜಿಗವೆಂಬೊ ಸೋಗು ಯಾಕೆ e್ಞÁನ ಪರಿಪೂರ್ಣ ಸಿರಿ ವಿಜಯವಿಠ್ಠಲರೇಯಾ ನಾನು ಬೇಡುವದೇನು ಸರ್ವಪ್ರೇರಕೆ ಪ್ರೀಯಾ||5||

Thoughts & Reflections

0

No reflections shared yet. Be the first to share your thoughts!

Share your thought