Bhasaka
← Back to home

ನಿನ್ನ ಮೂರುತಿ ನಿಲ್ಲಿಸೊ ವೆಂಕಟಸ್ವಾಮಿ

Author: ವಿಜಯದಾಸCategory: ಶ್ರೀಕೃಷ್ಣ
ನಿನ್ನ ಮೂರುತಿ ನಿಲ್ಲಿಸೊ ವೆಂಕಟಸ್ವಾಮಿ ಪ್ರ ಸನ್ನ ವದನ ಭುಜಗನ ಗಿರಿಯ ತಿಮ್ಮಾ ಪೊಳೆವ ಕಿರೀಟಕುಂಡಲ ಕರ್ಣ ಪಣೆಯಲ್ಲಿ ತಿಲಕ ಬಿಲ್ಲಿನ ಪುಬ್ಬು ಸುಳಿಗೂದಲಿಂದೊಲಿವ ||1|| ಕದಪು ಕೂರ್ಮನಂತೆ ಸುಧೆಯ ಸುರಿವ ವದನ ಅಧರ ನಾಸಿಕ ಕಪೋಲ ಮುದ್ದುನಗೆಯಿಂದೊಲಿವ||2|| ಕೊರಳ ತ್ರಿರೇಖೆ ಉಂಗುರ ಬೆರಳ ಶಂಖ ಸುದರಶನ ಕಟಿ ಅಭಯ ಕರ ಚತುಷ್ಟಯಿಂದೊಲಿವ||3|| ಶ್ರೀವತ್ಸ ಕೌಸ್ತುಭ ನ್ಯಾವಳ ವೈಜಯಂತ ಆವಾವಾಸರ ಉದರ ತ್ರಿವಳಿಯಿಂದೊಲಿವಾ||4|| ಬಡ ನಡು ನಾಭಿಯು ಉಡುದಾರ ಪೊಂಬಟ್ಟೆ ಉಡಿಗೆ ಕಿಂಕಿಣಿಗಂಟಿ ನುಡಿ ತೊಡರಿಂದೊಲಿವಾ ||5|| ಊರು ಜಾನು ಜಂಘೆ ಚಾರುಪೆಂಡೆ ನೂಪುರ ಭೋರಗರೆವ ಗೆಜ್ಜೆ ತೋರುತ್ತ ನಲಿದೊಲಿವಾ ||6|| ಧ್ವಜ ವಜ್ರಾಂಕುಶ ಸರ ಸಿಜ ರೇಖಿಯ ಚರಣ ವ್ರಜನಂದ ಬಾಲಕ ವಿಜಯವಿಠ್ಠಲ ತಿಮ್ಮಾ ||7||

Thoughts & Reflections

0

No reflections shared yet. Be the first to share your thoughts!

Share your thought