Bhasaka
← Back to home

ನಿನ್ನ ವಶದಲಿ ಇದ್ದು ಇದ್ದು

Author: ವಿಜಯದಾಸCategory: ಶ್ರೀಕೃಷ್ಣ
ನಿನ್ನ ವಶದಲಿ ಇದ್ದು ಇದ್ದು ಮುನ್ನೆ ದುರ್ವೃತ್ತಿಗೆ ಪೋಗುವುದೆನ್ನ ಮನಾ ||ಪ|| ಚಿತ್ರವಾದ ಕರಿಯ ಶೃಂಗರಿಸಿ ಮೇಲೆ ಛತ್ರಿಗೆ ನೆರಳಲ್ಲಿ ಕುಳ್ಳಿರೆನೆ ಆನೆ ಕೆಳಗೆ ಇಳಿದು ಬೂದಿಯೊಳಗಿಪ್ಪ ಕತ್ತೆ ಏರುವನೆಂದು ಇಚ್ಛೆ ಮಾಡುತಲಿದೆ ||1|| ಕಾಲಕಾಲಕೆ ಸುಧಿಯ ಸವಿದು ಮಾಣಿಕದ ಉಯ್ಯಾಲೆ ಮೇಲಾಡುತ್ತ ಬಾಳು ಎನೆ ತಾಳವೃಕ್ಷವನೇರಿ ತಲೆಕೆಳಗಾಗಿ ತಾ ಬೀಳುವೆನೆಂದು ಅಪೇಕ್ಷೆ ಮಾಡುತಲಿದೆ ||2|| ವೇಣಿ ಮಾಧವರಾಯಾ ನಿನ್ನ ಚರಣಾಂಬುಜ ಕಾಣುವ ಪ್ರಕಾಶ ಉದಾಸಸಿ ಕ್ಷೋಣಿಯೊಳಗೆ ಮಹಾ ಕತ್ತಲೆ ಬಯಸುವೆ ಹೀನನಂತೆಯಾದೆ ವಿಜಯವಿಠ್ಠಲರೇಯಾ ||3||

Thoughts & Reflections

0

No reflections shared yet. Be the first to share your thoughts!

Share your thought