Bhasaka
← Back to home

ನಿನ್ನನೆ ನಂಬಿದೆ ಅನ್ಯರೊಬ್ಬರ ಕಾಣೆ ಮಧ್ವರಾಯಾ

Author: ವಿಜಯದಾಸCategory: ಶ್ರೀಮಧ್ವಾಚಾರ್ಯ
ನಿನ್ನನೆ ನಂಬಿದೆ ಅನ್ಯರೊಬ್ಬರ ಕಾಣೆ | ಮಧ್ವರಾಯಾ ನಿಮ್ಮ ಸಿದ್ಧಾಂತದಿ ಮನವ ನಿಲ್ಲಿಸಯ್ಯ | ಮಧ್ವರಾಯಾ ಪತಿತ ಸಂಕರ ಪುಟ್ಟಿ ಮತವೆಲ್ಲ ಕೆಡಿಸಲು || ಮಧ್ವರಾಯಾ || ಗತಿಯ ಕಲ್ಪಿಸಿ ಸಜ್ಜನರ ತತಿಗಳ ಕಾಯಿ || ಮಧ್ವರಾಯಾ ||1|| ತಂದೆ ತಾಯಿ ಬಂಧು ಬಳಗವೆಲ್ಲವು ನೀನೆ | ಮಧ್ವರಾಯಾ | ಎಂದೆಂದಿಗು ನಿಮ್ಮ ಪೋದಿರುವಂತೆ ಮಾಡೈ | ಮಧ್ವರಾಯಾ ||2|| ಬಾಲಕೃಷ್ಣನ ಸೇವೆ ಮೇಲಾಗಿ ಮಾಡುವ | ಮಧ್ವರಾಯಾ | ಮೂಲ ಮೂವತ್ತೇಳು ಮೇಲು ಗ್ರಂಥಗಳಿತ್ತೆ | ಮಧ್ವರಾಯಾ ||3|| ಶ್ರೀನಿಧಿ ಕೃಷ್ಣನೆ ಜಗಕೆಲ್ಲ ದೊರೆಯೆಂಬ | ಮಧ್ವರಾಯಾ | ಆನಂದ ಮುನಿಯೆಂದು ನೀನು ಹೆಸರು ಪೊತ್ತೆ | ಮಧ್ವರಾಯಾ ||4|| ಅಜಪದಕೆ ಬಂದು ಅಖಿಲರ ಪಾಲಿಪ | ಮಧ್ವರಾಯಾ | ವಿಜಯಸಾರಥಿ ಕೃಷ್ಣ ವಿಜಯವಿಠ್ಠಲಪ್ರಿಯ | ಮಧ್ವರಾಯಾ ||5||

Thoughts & Reflections

0

No reflections shared yet. Be the first to share your thoughts!

Share your thought