Bhasaka
← Back to home

ನೀನೆ ದೀನಜನ ಬಂಧೂ ದಯಾರಸ ಸಿಂಧೂ

Author: ವಿಜಯದಾಸCategory: ಶ್ರೀಕೃಷ್ಣ
ನೀನೆ ದೀನಜನ ಬಂಧೂ ದಯಾರಸ ಸಿಂಧೂ ದಿವಿಜರ ಸಮುದಾಯವಿದ್ದರೇನು ಅವನ ವ್ಯಾಳೆಗೆ ಒದಗಲಿಲ್ಲಾ ಅವನಿವಲ್ಲಭ ಅವ್ಯಯವೆಂದರೆ ಅವಸರಕ್ಕೊದಗಿ ಕಾಯದೇ ಕೃಷ್ಣಾ ||1|| ಭೂತ ಪರಿವಾರವಿದ್ದರೇನು ಆತನ ಅಭಂಗಕ್ಕೆ ಒದಗಲಿಲ್ಲಾ ಪೂತಾತ್ಮ ಪುರುಷೋತ್ತಮನೆಂದರೆ ಚಾತುರ್ಯದಿಂದ ಸಲಹಿದೆ ಕೃಷ್ಣಾ ||2|| ಚತುರಾಸ್ಯಾದಿಗಳು ಇದ್ದರೇನು ಶ್ರುತಿಯಹಾನಿರೆ ಒದಗಲಿಲ್ಲಾ ಚತುರಾತ್ಮ ಸಿರಿಪತಿ ಉರಗಾದ್ರಿ ಪತಿ ವಿಜಯವಿಠ್ಠಲನೇ ಕಾಯ್ದ ಕೃಷ್ಣಾ||3||

Thoughts & Reflections

0

No reflections shared yet. Be the first to share your thoughts!

Share your thought